ಬೆಂಗಳೂರು: ಇತ್ತೀಚೆಗೆ ಚೆನ್ನೈನಲ್ಲಿ ನಡೆದ ‘ಎಸ್ಎಇ ಡ್ರೋನ್ ಡೆವಲಪ್ಮೆಂಟ್ ಚಾಲೆಂಜ್–2025’ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಫಿಕ್ಸಡ್ ವಿಂಗ್ ಡ್ರೋನ್ ಸ್ಪರ್ಧೆಯಲ್ಲಿ ಎಲ್ಲ ವಿಭಾಗಗಳಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಏವಿಯನ್ಸ್ ತಂಡವು ಉತ್ತಮ ಪ್ರದರ್ಶನ ನೀಡಿದ್ದು, ಎರಡನೇ ಸ್ಥಾನದೊಂದಿಗೆ ₹45 ಸಾವಿರ ಬಹುಮಾನ ಪಡೆದುಕೊಂಡಿದೆ.

ಪ್ರಾಧ್ಯಾಪಕ ಎಸ್.ವಿ. ಸತೀಶ್ ಅವರ ಮಾರ್ಗದರ್ಶನದಲ್ಲಿ ತಂಡವು ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಗುರುರಾಮ್ ಶ್ರೇಯಾ (ತಂಡದ ನಾಯಕ), ಬಿ.ಎಸ್. ಅನುರಾಗ್ ರಾವ್, ಗೀತೇಶ್ ನಾಯ್ಡು, ಶುಭಾಂಗಿ ಶ್ರೀವಾಸ್ತವ, ಉದಯ್ ಗೋಪನ್, ಆದರ್ಶ್ ಡಿ., ಜಾನ್ಹವಿ ಅಶ್ವಿನ್ ಖೇರ್, ಆ್ಯಂಡೆ ಹೇಮಂತ್, ಉದಿತಿ ಮೌರ್ಯಾಂದ್, ಹೇಮಾಕ್ಷ ಬ್ರೆಜಾ ತಂಡದಲ್ಲಿದ್ದರು.

ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಜವಾಹರ್ ದೊರೆಸ್ವಾಮಿ, ಕುಲಪತಿ ಜೆ. ಸೂರ್ಯ ಪ್ರಸಾದ್ ಅವರು ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.