ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರರಿಗೆ ಪ್ರಾತಿನಿಧ್ಯ ನೀಡಲು ಮನವಿ

Published 11 ಮಾರ್ಚ್ 2024, 15:32 IST
Last Updated 11 ಮಾರ್ಚ್ 2024, 15:32 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಂಜಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಆಗ್ರಹಿಸಿದೆ.

ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಬಂಜಾರ ಸಮುದಾಯ ಹೊಂದಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಈ ಸಮುದಾಯ ನಿರ್ಣಾಯಕವಾಗಿದೆ. 2.5 ಲಕ್ಷಕ್ಕೂ ಅಧಿಕ ಬಂಜಾರರು ಇರುವ ವಿಜಯಪುರ ಮೀಸಲು ಕ್ಷೇತ್ರದಲ್ಲಿ 4 ಬಾರಿ ಬಂಜಾರ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಈ ಬಾರಿ ಟಿಕೆಟ್‌ ನೀಡದೇ ಇರುವುದು ಆಘಾತವನ್ನು ಉಂಟು ಮಾಡಿದೆ ಎಂದು ಸಂಘದ ಅಧ್ಯಕ್ಷೆ ಬಿ.ಟಿ. ಲಲಿತಾ ನಾಯಕ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಸದಾಶಿವ ಆಯೋಗದ ಒಳಮೀಸಲಾತಿಯ ಘೋಷಣೆ ಮಾಡಿದ್ದ ಹಿಂದಿನ ರಾಜ್ಯ ಸರ್ಕಾರ ಅಧಿಕಾರವನ್ನೇ ಕಳೆದುಕೊಂಡಿರುವುದು ರಾಜ್ಯದ ಜನರಿಗೆ ಗೊತ್ತಿದೆ. ಕಾಂಗ್ರೆಸ್‌ ಬಂಜಾರರನ್ನು ಕಡೆಗಣಿಸದೇ ಅಭ್ಯರ್ಥಿಗಳ ಬಗ್ಗೆ ಮರುಪರಿಶೀಲನೆ ಮಾಡಬೇಕು. ಗೆಲ್ಲುವ ಸಾಮರ್ಥ್ಯ ಇರುವ ಸ್ಥಳೀಯ ಬಂಜಾರರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿದ್ಯಾನಾಯಕ್‌, ಅಶ್ವಥ್‌ ನಾಯಕ್‌, ಪಿ.ಕೆ. ಖಂಡೋಬ, ಸುಬ್ರಮಣ್ಯ ನಾಯಕ್‌, ಶಂಕರ್‌ ನಾಯಕ್‌, ನರಸಿಂಹ ನಾಯಕ್‌, ಪರಮೇಶ್‌ ನಾಯಕ್‌, ಮನೋಹರ ಐನಾಪುರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT