ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ದಂಪತಿಗೆ ನೆರವಾದ ಪಿಎಸ್‌ಐ

Last Updated 31 ಮೇ 2021, 20:24 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಊಟಕ್ಕೂ ಪರದಾಡುತ್ತಿದ್ದ ಅಂಧ ದಂಪತಿಗೆ ವಿಜಯನಗರ ಪಿಎಸ್‌ಐ ಮನು, ಐದು ತಿಂಗಳಿಗೆ ಆಗುವಷ್ಟು ದಿನಸಿ ಹಾಗೂ ಮಕ್ಕಳ ಔಷಧಿ ಕೊಡಿಸಿದ್ದಾರೆ.

ಆರ್‌ಎಂಸಿ ಯಾರ್ಡ್ ಸಮೀಪದ ನಿವಾಸಿಗಳಾದ ಬಸವರಾಜು–ಚಿನ್ನಮ್ಮ ದಂಪತಿಗೆ ಎರಡು ವರ್ಷದ ಮಗು ಹಾಗೂ ಆರು ತಿಂಗಳ ಮಗು ಇದೆ. ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದೇ ಕಷ್ಟವಾಗಿತ್ತು. ನಿರ್ಗತಿಕರಿಗೆ ದಿನಸಿ ನೀಡುತ್ತಿದ್ದ ಸುದ್ದಿ ತಿಳಿದ ದಂಪತಿ, ಮಕ್ಕಳ ಸಮೇತ ವಿಜಯನಗರಕ್ಕೆ ಬಂದಿದ್ದರು.

ವಿಜಯನಗರ ಠಾಣೆ ಬಳಿ ದಂಪತಿಯನ್ನು ಮಾತನಾಡಿಸಿದ್ದ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮನು, ಅವರ ಕಥೆ ಕೇಳಿ ಕಣ್ಣೀರಿಟಿದ್ದರು. ನಾಲ್ಕು ತಿಂಗಳಿಗೆ ಆಗುವಷ್ಟು ದಿನಸಿ ಖರೀದಿಸಿ ನೀಡಿದರು. ನಂತರ ಆಟೊದಲ್ಲಿ ದಂಪತಿಯನ್ನು ಮನೆಗೆ ಕಳುಹಿಸಲಾಯಿತು. ಪಿಎಸ್‌ಐ ಕೆಲಸಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

50 ಕೆ.ಜಿ ಅಕ್ಕಿ, 10 ಕೆ.ಜಿ ಬೇಳೆ, 5 ಕೆ.ಜಿ ಗೋಧಿ ಹಿಟ್ಟು, 10 ಲೀಟರ್ ಎಣ್ಣೆ, 12 ಮೈ ಸೋಪು, 12 ಬಟ್ಟೆ ಸೋಪು, 10 ಕೆ.ಜಿ. ಸಕ್ಕರೆ, 2 ಕೆ.ಜಿ ಟೀ ಪುಡಿ, 1 ಕೆ.ಜಿ ಹಾಲಿನ ಪೌಡರ್, ಬಿಸ್ಕೆಟ್, ಮಗುವಿಗೆ ಪೌಡರ್ ಹಾಗೂ ಮಕ್ಕಳಿಗೆ ಬೇಕಾದ ಔಷಧಿಗಳು ದಿನಸಿ ಜೊತೆಯಲ್ಲಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT