ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಅಂಚೆ ಲಕೋಟೆ ಬಿಡುಗಡೆ

ಒಂದು ಸಾವಿರ ಅಂಚೆ ಎಟಿಎಂ ಕೇಂದ್ರ ಸ್ಥಾಪನೆ
Last Updated 17 ಜೂನ್ 2020, 16:47 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಒಂದು ಸಾವಿರ ಅಂಚೆ ಎಟಿಎಂ ಕೇಂದ್ರಗಳ ಸ್ಥಾಪನೆಯ ನೆನಪಾರ್ಥ ವಿಶೇಷ ಅಂಚೆ ಲಕೋಟೆಯನ್ನು ಅಂಚೆ ಇಲಾಖೆ ಬುಧವಾರ ಬಿಡುಗಡೆ ಮಾಡಿತು.

ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ (ಜಿಪಿಒ) ವಿಡಿಯೊ ಸಂವಾದದ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಿಜೋರಾಂನ ಲಂಗ್ಲೇರಿಯಲ್ಲಿ ತೆರೆಯಲಾಗಿರುವ ನೂತನ ಅಂಚೆ ಎಟಿಎಂ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಲಂಗ್ಲೇರಿ ಅಂಚೆ ಎಟಿಎಂ ಕೇಂದ್ರ 1,000ನೇ ಪಟ್ಟಿಗೆ ಸೇರ್ಪಡೆಯಾಯಿತು.

‘ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿರುವ ಅಂಚೆ ಇಲಾಖೆ, ಮಿಜೋರಾಂನ ಗುಡ್ಡಗಾಡು ಪ್ರದೇಶದಲ್ಲೂ ಎಟಿಎಂ ಕೇಂದ್ರ ಆರಂಭಿಸಿದೆ. 1 ಸಾವಿರ ಎಟಿಎಂ ಕೇಂದ್ರಗಳನ್ನು ತೆರೆಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಲಾಕ್‍ಡೌನ್ ವೇಳೆ ಇಲಾಖೆಯ ಎಟಿಎಂಗಳ ಮೂಲಕ ಸುಮಾರು ₹404 ಕೋಟಿ ವಹಿವಾಟು ನಡೆದಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಶೇ 85 ರಷ್ಟು ಖಾತೆಗಳನ್ನು ಇಲಾಖೆ ನಿರ್ವಹಿಸುತ್ತಿದೆ’ ಎಂದು ಭಾರತೀಯ ಅಂಚೆ ಇಲಾಖೆಯ ಬ್ಯಾಂಕಿಂಗ್ ಸದಸ್ಯೆ ಸಂಧ್ಯಾರಾಣಿ ತಿಳಿಸಿದರು.

ಚೆನ್ನೈನಲ್ಲಿ ಮೊದಲ ಎಟಿಎಂ: ‘ಭಾರತೀಯ ಅಂಚೆ ಇಲಾಖೆಯು ಮಾಹಿತಿ ತಂತ್ರಜ್ಞಾನ ಆಧುನೀಕರಣ ಯೋಜನೆಯಡಿ 2014ರಲ್ಲಿ ಮೊದಲ ಅಂಚೆ ಎಟಿಎಂ ಕೇಂದ್ರವನ್ನು ಚೆನ್ನೈನಲ್ಲಿ ತೆರೆಯಿತು. ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಿಂದ ಈ ಎಲ್ಲ ಎಟಿಎಂ ಕೇಂದ್ರಗಳ ನಿರ್ವಹಣೆ ಮಾಡಲಾಗುವುದು. ಇಲ್ಲಿರುವ ಉತ್ತಮ ತಾಂತ್ರಿಕ ನಿರ್ವಹಣೆಯ ತಂಡದ ನೆರವಿನಿಂದ ಗುಡ್ಡಗಾಡು ಪ್ರದೇಶಗಳಲ್ಲಿರುವ ಎಟಿಎಂಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಅಂಚೆ ಇಲಾಖೆ ಎಂಟಿಎಂ ನಿರ್ವಹಣೆ ಕೇಂದ್ರದ ಹಿರಿಯ ಅಧಿಕಾರಿ ರಾಜೇಂದ್ರ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT