ಅಂಚೆ ವಿಮೆ: ಪ್ರತಿನಿಧಿಗಳ ನಿಯುಕ್ತಿಗೆ ಸಂದರ್ಶನ

ಬೆಂಗಳೂರು: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆ ಪಾಲಿಸಿಗಳನ್ನು ಮಾರಾಟ ಮಾಡಲು ಪ್ರತಿನಿಧಿಗಳ ನಿಯುಕ್ತಿಗಾಗಿ ಅಂಚೆ ಇಲಾಖೆಯು ಇದೇ 17ರಂದು ಬೆಳಿಗ್ಗೆ 11ಕ್ಕೆ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಏರ್ಪಡಿಸಿದೆ.

ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರಗಳೊಂದಿಗೆ ಸ್ವವಿವರ, ಶೈಕ್ಷಣಿಕ ಪ್ರಮಾಣಪತ್ರದ ಛಾಯಾಪ್ರತಿಗಳೊಂದಿಗೆ ಮಹಾಲಕ್ಷ್ಮಿಪುರ ಪೊಲೀಸ್ ಠಾಣೆ ಬಳಿ ಇರುವ ಬೆಂಗಳೂರು ಪಶ್ಚಿಮ ಅಂಚೆ ವಿಭಾಗ, ವರಿಷ್ಠ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.

ನಿರುದ್ಯೋಗಿಗಳು, ಸ್ವಯಂ ಉದ್ಯೋಗಿಗಳು, ವಿಮಾ ಕಂಪನಿಗಳ ಮಾಜಿ ಏಜೆಂಟರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿಗಳ ಮಾಜಿ ಸದಸ್ಯರು, ಮಹಿಳಾ ಮಂಡಲದ ಕಾರ್ಯಕರ್ತೆಯರು ಭಾಗವಹಿಸಬಹುದು. ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣ ಹೊಂದಿರಬೇಕು, 18ರಿಂದ 50 ವರ್ಷದ ಒಳಗಿನವರಾಗಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ ₹5,000 ಭದ್ರತಾ ಠೇವಣಿ ಇಡಬೇಕು. ಅಭ್ಯರ್ಥಿಗಳಿಗೆ ವ್ಯವಹಾರಕ್ಕೆ ತಕ್ಕಂತೆ ಕಮಿಷನ್ ನೀಡಲಾಗುವುದು. ವಿವರಗಳಿಗೆ 7975127704/080–23493283 ಸಂಪರ್ಕಿಸುವುದು.

ಗ್ರಾಹಕರಿಗೆ ಹಲವು ಕೊಡುಗೆ

ಬೆಂಗಳೂರು: ಫ್ಯಾಷನ್, ಲೈಫ್ಸ್ಟೈಲ್ ಮತ್ತು ಕೊಡುಗೆಗಳ ತಾಣವಾದ ಶಾಪರ್ಸ್ ಸ್ಟಾಪ್, ‘ಸ್ಟೈಲ್ ಇನಿಂಗ್ಸ್’ ಎಂಬ ಹೊಸ ಅಭಿಯಾನ ಆರಂಭಿಸಿದೆ. ದೇಶದಾದ್ಯಂತ ಇರುವ ಮಳಿಗೆಗಳಲ್ಲಿ ಮಾರ್ಚ್ 8ರವರೆಗೆ ನಡೆಯುವ ಈ ಅಭಿಯಾನದಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯಲು ಅವಕಾಶ ಇದೆ.

ಕ್ರಿಕೆಟ್ನ ಉತ್ಸಾಹ ಮತ್ತು ಶಾಪಿಂಗ್ನ ಸಡಗರವನ್ನು ಹೆಚ್ಚಿಸಲು ‘ಶಾಪ್ ಅಂಡ್ ವಿನ್’ನಂತಹ ಆಕರ್ಷಕ ಆಯ್ಕೆಗಳನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಗ್ರಾಹಕರು ₹7,500 ಮೊತ್ತದ ಶಾಪಿಂಗ್ ಮೇಲೆ ₹750ರ ವೋಚರ್ ಅಥವಾ ₹15,000 ಮೊತ್ತದ ಶಾಪಿಂಗ್ ಮೇಲೆ ₹1,500 ಮೊತ್ತದ ವೋಚರ್ಗಳನ್ನು ಪಡೆಯಬಹುದು.

ಗ್ರಾಹಕರು ₹7,500 ಮೊತ್ತದ ಶಾಪಿಂಗ್ ಮಾಡುವ ಮೂಲಕ ಬಿಎಂಡಬ್ಯು ಬೈಕ್, ಲೈಫ್ ಬ್ರ್ಯಾಂಡ್ಗಳ ಫ್ಯಾಷನ್ ಟೀ ಶರ್ಟ್ಗಳು ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ. ಅಲ್ಲದೆ ಪಿವಿಆರ್ ಐನಾಕ್ಸ್ನಲ್ಲಿ ಕ್ರಿಕೆಟ್ ವೀಕ್ಷಿಸಲು ದಂಪತಿಗೆ ಟಿಕೆಟ್ ಸೇರಿದಂತೆ ಹಲವು ಆಫರ್ಗಳಿವೆ.

ಗ್ರಾಹಕರು ಈ ಕೊಡುಗೆಗಳನ್ನು ಪಡೆಯಲು ಶಾಪರ್ಸ್ ಸ್ಟಾಪ್ ಮಳಿಗೆಗಳಿಗೆ ಭೇಟಿ ನೀಡಬಹುದು ಅಥವಾ www.shoppersstop.com ಮೂಲಕ ಆನ್ಲೈನ್ನಲ್ಲಿ ಶಾಪಿಂಗ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ನೇಮಕ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಚಿತ್ರ ನಿರ್ಮಾಪಕ ಎ.ಎಲ್ಲಪ್ಪ ಅವರನ್ನು ನೇಮಕ ಮಾಡಲಾಗಿದೆ.

ಶೈಲಜಾ ನೇಮಕ

ಬೆಂಗಳೂರು: ಯಲಹಂಕ ತಾಲ್ಲೂಕು, ಹೆಸರಘಟ್ಟ ಹೋಬಳಿಯ ಕಸಘಟ್ಟಪುರ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಯನ್ನಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶೈಲಜಾ ಅವರನ್ನು ನೇಮಕ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.