ಮಂಗಳವಾರ, ಅಕ್ಟೋಬರ್ 26, 2021
21 °C

ಬಡತನ, ಹಸಿವು, ರೋಗ ಕಾಂಗ್ರೆಸ್‌ ಕೊಡುಗೆ: ನಳಿನ್‌ ಕುಮಾರ್ ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ವಾತಂತ್ಯದ ನಂತರ ಬಹುತೇಕ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಬಡತನ, ಹಸಿವು, ರೋಗ ಮತ್ತು ನಿರುದ್ಯೋಗವನ್ನು ದೇಶದ ಜನರಿಗೆ ಕೊಡುಗೆಯಾಗಿ ನೀಡಿತು ಎಂದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದರು.

ನಗರದ ಬಿಟಿಎಂ ಬಡಾವಣೆಯಲ್ಲಿ ಯುವ ಮೋರ್ಚಾ ಸಂಘಟಿಸಿದ ನವಭಾರತ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿಯವರು ಭವಿಷ್ಯದ ಬೆಳಕು ನೀಡಿದ ನಾಯಕ. ದೇಶದಲ್ಲಿ 2014 ರವರೆಗೆ ಯುವಕರು ಸ್ವಾಮಿ ವಿವೇಕಾನಂದರನ್ನು ಪೂಜಿಸಿ ಆರಾಧಿಸಿದರು. ಅಮಿತಾಬ್‌ ಬಚ್ಚನ್‌, ಶಾರೂಖ್‌ ಖಾನ್‌ ಅವರನ್ನು ಪ್ರೀತಿಸಿದ್ದು ಕಂಡಿದ್ದೇವೆ. 2014 ರ ಬಳಿಕ ದೇಶದ ಯುವಕರು ಮೋದಿಯರವನ್ನು ಆರಾಧಿಸುತ್ತಿದ್ದಾರೆ. ಅವರನ್ನೇ ಪ್ರೀತಿಸುತ್ತಿದ್ದಾರೆ. ಅವರು ಈ ದೇಶದ ಐಕಾನ್‌
ಆಗಿ ಹೊರ ಹೊಮ್ಮಿದ್ದಾರೆ ಎಂದರು.

ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿದ್ದ ಕನಸನ್ನು ನನಸು ಮಾಡಲು ದೃಢ ಸಂಕಲ್ಪ ಮಾಡಿದ್ದಾರೆ. ಬಡತನ, ಹಸಿವು, ರೋಗ ಮುಕ್ತ ಭಾರತದ ನಿರ್ಮಾಣ ಮಾಡಲು ಶ್ರಮಿಸುತ್ತಿದ್ದಾರೆ. ರಾಮಮಂದಿರಕ್ಕೆ ಮಾತ್ರ ಶಿಲಾನ್ಯಾಸ ಮಾಡಿಲ್ಲ, ಸದೃಢ ಮತ್ತು ಸಮೃದ್ಧ ಭಾರತ ನಿರ್ಮಾಣಕ್ಕೆ ಅವರು ಶಿಲಾನ್ಯಾಸ ಮಾಡಿದ್ದಾರೆ ಎಂದು ನಳಿನ್‌ ಕುಮಾರ್‌ ಹೇಳಿದರು.

ಆರ್‌.ಆರ್‌.ನಗರದಲ್ಲಿ ಕಮಲ ಅರಳಿದೆ. ಇಲ್ಲಿ ಕಮಲ ಅರಳಿದ ಮೇಲೆ ಇನ್ನು ಬಿಟಿಎಂಲೇಔಟ್‌ ಬಾಕಿ ಉಳಿದೀತೇ? ಮುಂದಿನ ದಿನಗಳಲ್ಲಿ ಸಿದ್ರಾಮಣ್ಣ, ರಾಮಲಿಂಗಾರೆಡ್ಡಿ ಅವರಿಗೆ ಚುನಾವಣೆಗೆ ನಿಲ್ಲಲು ಜಾಗ ಇಲ್ಲದ ಸ್ಥಿತಿ ಉಂಟಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಸಚಿವ ಮುನಿರತ್ನ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್‌ ಕುಮಾರ್‌ ಮುಂತಾದವರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು