ಮಂಗಳವಾರ, ಜನವರಿ 26, 2021
28 °C

ವಿದ್ಯುತ್ ವ್ಯತ್ಯಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 7ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಗಂಗಾನಗರ, ಮುನಿರಾಮಣ್ಣ ಬ್ಲಾಕ್, ಸಿಬಿಐ ಕಚೇರಿ, ಕೌಸರ್ ನಗರ, ಆರ್‌ಬಿಐ ಕಾಲೊನಿ, ಚಾಮುಂಡಿನಗರ, ದಿಣ್ಣೂರು ಮುಖ್ಯರಸ್ತೆ, ಆನಂದ ನಗರ, ಮಂಜುನಾಥ ಬಡಾವಣೆ, ಧರ್ಮಣ್ಣ ಗಾರ್ಡನ್, ಆರ್.ಟಿ. ನಗರ, ಸಿಬಿಐ ಮುಖ್ಯ ಕಚೇರಿ, ಎಚ್‌ಎಂಟಿ ಬಡಾವಣೆ, ಗುಡ್ಡದಹಳ್ಳಿ ಮುಖ್ಯರಸ್ತೆ, ಹೊರ ವರ್ತುಲ ರಸ್ತೆ, ದೀನಾ ಬ್ಯಾಂಕ್ ಕಾಲೊನಿ, ಎಸ್‌ಬಿಎಂ ಕಾಲೊನಿ, ಹೆಬ್ಬಾಳ, ಅಶ್ವತ್ಥನಗರ, ಡಾಲರ್ಸ್ ಕಾಲೊನಿ, ಅರಮನೆ ನಗರ, ಭೂಪಸಂದ್ರ, ವೈಟ್‌ಹೌಸ್ ಎಂಬೆಸ್ಸಿ, ರಾಜೀವ್‌ಗಾಂಧಿ ದಂತವೈದ್ಯಕೀಯ ಕಾಲೇಜು, ಭುವನೇಶ್ವರಿ ನಗರ, ಆಚಾರ್ಯ ಕಾಲೇಜು ರಸ್ತೆ, ಮೌಲಾ ಮಸೀದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಶ್ರೀನಿವಾಸ ಬಡಾವಣೆ, ಕೆಎಚ್‌ಬಿ ಕ್ವಾರ್ಟರ್ಸ್‌, ಆದಿತ್ಯನಗರ, ಡಿ ಮಾರ್ಟ್, ಮಂಜುಶ್ರೀ ಆಸ್ಪತ್ರೆ ರಸ್ತೆ, ಅಂಬೇಡ್ಕರ್ ಕಾಲೇಜು, ಕಾವಲ್‌ ಬೈರಸಂದ್ರ, ಸುಲ್ತಾನ್‌ ಪಾಳ್ಯ, ಮನೋರಾಯನಪಾಳ್ಯ, ಪೆರಿಯಾರ್ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

ವಿದ್ಯುತ್‌ ವ್ಯತ್ಯಯ 9ಕ್ಕೆ: ಜಯನಗರ ಉಪವಿಭಾಗ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಇದೇ 9ರಂದು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ದ್ವಾರಕಾನಗರ, ಹೊಸಕೆರೆಹಳ್ಳಿ, ಜನಶಕ್ತಿನಗರ, ಹೃಷಿಕೇಷನಗರ, ಕೆರೆಕೋಡಿ, ಪಿಇಎಸ್ ಕಾಲೇಜು, ಹೊಸಕೆರೆಹಳ್ಳಿ ಕೆರೆ, ಡಿಸೋಜಾ ನಗರ, ಪುಷ್ಪಗಿರಿ ನಗರ, ಕೃಷ್ಣಪ್ಪ ಬಡಾವಣೆ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು