ಸ್ವಚ್ಛಂದ ಗಗನದಲ್ಲಿ ಹಾರಾಡುವ ಮನಸು, ಶಾಲೆಯೊಳಗೆ ಕಟ್ಟಿಹಾಕಿರುವ ವಯಸು. ಶಾಲಾ ಸಮಯ ಮುಗಿದೊಡನೆ, ದಿಗ್ವಿಜಯದ ನಗೆ ಬೀರಿ, ಮನೆ ಸೇರುವ ನಿರೀಕ್ಷೆಯಲ್ಲಿರುವ ಈ ಚಿಣ್ಣರ ಚಿತ್ರಗಳು, ಬದುಕಿನ ಹಲವು ಕತೆಗಳನ್ನೇ ತೆರೆದಿಡುತ್ತವೆ. ಅಜ್ಜನ ಕೋಲಿದು ನನ್ನಯ ಕುದುರೆ ಎಂದು ಹಾಡು ಹೇಳುತ್ತಲೇ ಅಪ್ಪನ ಮೂರುಗಾಲಿ ಸೈಕಲ್ ಮೇಲೆ ಅಂಬಾರಿಯೊಳಗೆ ಕುಳಿತ ಠೀವಿಯಲ್ಲಿ ಬಾಲೆ ಇದ್ದರೆ, ಅಪ್ಪ, ಜಗದ ಯಾವು ನೋವೂ ಮಗುವಿಗೆ ಸೋಕದಿರಲಿ ಎಂದು ಅವಡುಗಚ್ಚಿ ಹೊರಡುತ್ತಾರೆ. ಶಾಲಾ ಕಂಬಿಯ ಮೇಲೆ ಗದ್ದವೂರಿ ಕರೆಯಲು ಬರುವ ಅಮ್ಮನ ನಿರೀಕ್ಷೆಯಲ್ಲಿರುವ ಮಕ್ಕಳಿಗೆ ಅಮ್ಮನ ಸೆರಗು, ಕೆಲವೇ ಕ್ಷಣಗಳ ಅಂತರದಲ್ಲಿದೆ.ಇವೊತ್ತೇನಾಯ್ತು ಗೊತ್ತಾ.. ಅಂತ ಶುರುವಾಗುವ ಕತೆಗಳಿಗೆ, ಪಟ್ಟಾಂಗ ಹೊಡೆಯಲು ಬ್ಯಾಕ್ಸೀಟು ಅತ್ಯುತ್ತಮ ತಾಣ. ಕೂಡಿಟ್ಟ ಪುಡಿಕಾಸಿನಲ್ಲಿ ಏನೆಲ್ಲ ತೊಗೊಬಹುದು? ಶಾಲಾಮುಂದೆ ಕುಳಿತ ಬೀದಿ ವ್ಯಾಪಾರಿಯ ಬಳಿ ಕನಸುಗಳನ್ನು ಕೊಳ್ಳುವ ಕನಸುಕಂಗಳ ಬಾಲೆಯರುಮನೆ ಯಾವಾಗ ಬಂದೀತು ಎಂದು ಸಿಗ್ನಲ್ ಸಮಯ ಕಳೆಯುವ ಬೇಸರದಲ್ಲಿರುವ ಪುಟ್ತಾಯಿಯರು. ಇಂಥ ಹತ್ತು ಹಲವು ಕಥಾಚಿತ್ರಗಳನ್ನು ಸೆರೆ ಹಿಡಿದಿರುವುದು ಪ್ರಜಾವಾಣಿಯ ಫೋಟೊ ಜರ್ನಲಿಸ್ಟ್ ಪ್ರಶಾಂತ್ ಎಚ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.