ಗುರುವಾರ , ಫೆಬ್ರವರಿ 27, 2020
19 °C

ಪ್ರಜಾವಾಣಿ ಕ್ವಿಜ್‌: 30ರಂದು ಫೈನಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ 6ನೇ ಆವೃತ್ತಿಯ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನ ಅಂತಿಮ ಸುತ್ತಿನ ಸ್ಪರ್ಧೆ ಇದೇ 30ರಂದು ನಡೆಯಲಿದ್ದು, ನಗರದ ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದಾರೆ.

ಸೆಂಟ್ರಲ್‌ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಂದು ಬೆಳಿಗ್ಗೆ ಬೆಂಗಳೂರು ವಲಯದ ಅರ್ಹತಾ ಸುತ್ತಿನ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನದ ನಂತರ ಅಂತಿಮ ಸುತ್ತಿನ ಕ್ವಿಜ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಬೆಂಗಳೂರು ವಲಯ ಸೇರಿದಂತೆ ಒಟ್ಟು 12 ವಲಯಗಳಿಂದ ವಿಜೇತರಾದ ತಲಾ ಇಬ್ಬರು ಅಂತಿಮ ಹಣಾಹಣಿಯಲ್ಲಿ ತಮ್ಮ ಬೌದ್ಧಿಕ ಕಸರತ್ತು ತೋರಿಸಲಿದ್ದಾರೆ.

ಅಂದು ಬೆಳಿಗ್ಗೆ 8.30ರಿಂದ ನೋಂದಣಿ ಆರಂಭವಾಗುತ್ತದೆ. ಬೆಳಿಗ್ಗೆ ಬೆಂಗಳೂರು ವಲಯದ ಕ್ವಿಜ್‌ ಚಾಂಪಿಯನ್‌ಷಿಪ್‌ ನಡೆದು ಮಧ್ಯಾಹ್ನದ ವೇಳೆಗೆ ಅದು ಕೊನೆಗೊಳ್ಳುತ್ತದೆ. ನಂತರಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ.

ಮೈಸೂರು, ಹಾಸನ, ಉಡುಪಿ, ಮಡಿಕೇರಿ, ಮಂಗಳೂರು, ದಾವಣಗೆರೆ, ಧಾರವಾಡ, ಜಮಖಂಡಿ ಹಾಗೂ ಕಲಬುರ್ಗಿ, ರಾಯಚೂರಿ
ನಲ್ಲಿ ಕ್ವಿಜ್‌ ನಡೆದಿದ್ದು, ತುಮಕೂರಿನಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತ ತಂಡಕ್ಕೆ ₹50 ಸಾವಿರ ನಗದು ಬಹುಮಾನ ಇದೆ. 2ನೇ ಬಹುಮಾನ ₹30 ಸಾವಿರ, 3ನೇ ಬಹುಮಾನ ₹10 ಸಾವಿರ, 4ನೇ ಬಹುಮಾನ ₹6 ಸಾವಿರ, 5ನೇ ಬಹುಮಾನ ₹4 ಸಾವಿರ ಇದೆ.

10ನೇ ತರಗತಿವರೆಗಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ‍‍ಪಾಲ್ಗೊಳ್ಳಬಹುದು. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯ ಶಾಲೆಗಳು ಸ್ಪರ್ಧೆಯ ಬಗ್ಗೆ ಮಾಹಿತಿಗೆ 9606912242, 9742284543 ಸಂಪರ್ಕಿಸಬಹುದು. ಬಿಡದಿಯ ’ಶ್ರೀ ಶಿವ ದರ್ಶನ ಶಶಿ ತಟ್ಟೆ ಇಡ್ಲಿ ಹೋಟೆಲ್‌’ ಮಾಲೀಕರು ಆಹಾರ ವಿತರಣೆಯ ಪಾಲುದಾರರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು