ಬೆಂಗಳೂರು: ನಗರದಲ್ಲಿ ಮೇ 27ರಂದು ನಡೆದಿದ್ದ ‘ಟಿಸಿಎಸ್ ವಿಶ್ವ 10ಕೆ’ ಓಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ಯ ಛಾಯಾಗ್ರಾಹಕರಾದ ರಂಜು ಪಿ. ಹಾಗೂ ಕೃಷ್ಣಕುಮಾರ್ ಪಿ.ಎಸ್. ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ. ‘ಈ ನಾಡು’ ಪತ್ರಿಕೆಯ ಶ್ಯಾಮಸುಂದರ್ ಅವರು ತೃತೀಯ ಸ್ಥಾನ ಗಳಿಸಿದ್ದಾರೆ.

ವಿಧಾನಸೌಧ ಹಿನ್ನೆಲೆಯಲ್ಲಿ ಕಾಣುವಂತೆ ಓಟಗಾರರ ಬಲಿಷ್ಠ ಕಾಲುಗಳ ಚಲನೆಯ ದೃಶ್ಯವನ್ನು ಸೆರೆ ಹಿಡಿದ ರಂಜು ಪಿ. ಅವರ ಚಿತ್ರಕ್ಕೆ ಮೊದಲ ಬಹುಮಾನ ದೊರೆತಿದೆ. ಓಟಗಾರರೊಂದಿಗೆ ರೆಫ್ರಿಯ ಕೆಲಸವನ್ನು ಸೆರೆ ಹಿಡಿದ ಕೃಷ್ಣಕುಮಾರ್ ಪಿ.ಎಸ್. ಅವರ ಚಿತ್ರಕ್ಕೆ ಎರಡನೆಯ ಬಹುಮಾನ ದೊರೆತಿದೆ.

ರಂಜು ಪಿ. ಹಾಗೂ ಕೃಷ್ಣಕುಮಾರ್ ಪಿ.ಎಸ್. ಅವರು ಸೆರೆಹಿಡಿದಿದ್ದ ಚಿತ್ರಗಳು ಪ್ರಜಾವಾಣಿಯ ಮೆಟ್ರೊ ಪುರವಣಿಯಲ್ಲಿ ಮೇ 28ರಂದು ಪ್ರಕಟಗೊಂಡಿದ್ದವು.

(ರಂಜು ಪಿ. ಸೆರೆ ಹಿಡಿದ ಚಿತ್ರ)

(ಕೃಷ್ಣಕುಮಾರ್ ಪಿ.ಎಸ್.ಸೆರೆ ಹಿಡಿದ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.