ಸೋಮವಾರ, ಆಗಸ್ಟ್ 26, 2019
21 °C

13ರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌

Published:
Updated:

ಬೆಂಗಳೂರು: 2018-19ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ವರ್ಗಾವಣೆ ಕೌನ್ಸೆಲಿಂಗ್‌ ಇದೇ 13ರಿಂದ ಆರಂಭವಾಗಲಿದೆ.

ಜುಲೈ 28ರಂದು ಅಂತಿಮ ಆದ್ಯತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿರುವ ಶಿಕ್ಷಕರಿಗೆ ಬಸವನಗುಡಿಯ ಬಿಆರ್‌ಸಿ ಕೇಂದ್ರ, ಬೆಂಗಳೂರು ದಕ್ಷಿಣ ವಲಯ-01 ಟಿನ್ ಶಾಲೆ ಆವರಣದಲ್ಲಿ ಕೌನ್ಸೆಲಿಂಗ್‌ ನಡೆಯಲಿದೆ.

ನಿಗದಿತ ದಿನದಂದು ಶಿಕ್ಷಕರು ಕಡ್ಡಾಯ ಹಾಜರಾಗಬೇಕು. ಗೈರು ಹಾಜರಾಗುವ ಶಿಕ್ಷಕರಿಗೆ ಡಮ್ಮಿ ಕೌನ್ಸೆಲಿಂಗ್‌ನಲ್ಲಿ ಸ್ಥಳ ನಿಯುಕ್ತಿಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ.

Post Comments (+)