ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವದ ಸಾಹಿತ್ಯ ರಚಿಸಿದರೂ ಕಡೆಗಣನೆ: ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌

Last Updated 6 ಮಾರ್ಚ್ 2023, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನ ಪರಿಷತ್‌ನ ಒಳಗೆ ಹಾಗೂ ಸಮಾಜದ ನಡುವೆ ಶೋಷಿತರ ಪರವಾಗಿ ಹೋರಾಟ ನಡೆಸಿ, ಸಾಹಿತ್ಯ ಕೃತಿಗಳನ್ನೂ ರಚಿಸಿರುವ ಡಿ.ಎಸ್‌.ವೀರಯ್ಯ ಅವರ ಸಾಹಿತ್ಯವನ್ನು ವಿಮರ್ಶಾ ಕ್ಷೇತ್ರ ಕಡೆಗಣಿಸಿದೆ’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ವಿಷಾದಿಸಿದರು.

ನಗರದಲ್ಲಿ ಸೋಮವಾರ ಡಿವಿಎಸ್‌ ಫೌಂಡೇಶನ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿಧಾನ ಪರಿಷತ್‌ನಲ್ಲಿ ಡಿ.ಎಸ್‌.ವೀರಯ್ಯ’ ಕೃತಿ ಬಿಡುಗಡೆ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಡಾ.ಅಂಬೇಡ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಿದ್ದಲಿಂಗಯ್ಯ, ದೇವನೂರ ಮಹಾದೇವ ಜತೆಗೆ ಡಿ.ಎಸ್‌. ವೀರಯ್ಯ ಅವರೂ ಬರವಣಿಗೆ ಆರಂಭಿಸಿದ್ದರು. ಕಥೆ, ಕವಿತೆಗಳನ್ನೂ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರವು ವೀರಯ್ಯ ಅವರನ್ನು ರಾಜಕಾರಣಿಯಾಗಿ ಕಂಡಿತು. ಮಹತ್ವದ ಸಾಹಿತ್ಯ ರಚಿಸಿದ್ದರೂ ವಿಮರ್ಶಾ ಲೋಕ ಗುರುತಿಸಲಿಲ್ಲ’ ಎಂದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗ್ಸರ್‌ ಮಾತನಾಡಿ, ‘ವಿಶ್ವವಿದ್ಯಾಲಯವು 40 ವರ್ಷಗಳಿಂದ ಕನ್ನಡ ನಾಡು–ನುಡಿ, ವಿಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುತ್ತಿದೆ’ ಎಂದರು.

ಇದೇ ವೇಳೆ ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್ಸ್‌ ಸಂಸ್ಥೆ ಅಧ್ಯಕ್ಷ ಡಿ.ಎಸ್‌.ವೀರಯ್ಯ ಅವರಿಗೆ ಡಾ.ಅಂಬೇಡ್ಕರ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ ಥಪ್ರೊ.ಎಚ್.ಟಿ.ಪೋತೆ, ಕವಿ ಪ್ರೊ.ದೊಡ್ಡರಂಗೇಗೌಡ, ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಬಿ.ಜಿ.ಮಳಲಿಗೌಡ, ಡಾ.ಕೆ.ಶಾರದಾ, ಡಾ.ಚಿನ್ನಸ್ವಾಮಿ ಸೋಸಲೆ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT