ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ
ಬೆಂಗಳೂರು: ಐಎಫ್‌ಎಸ್ ಅಧಿಕಾರಿ, ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರಿಗೆ ಪಿಸಿಸಿಎಫ್ (ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ಹುದ್ದೆಗೆ ಬಡ್ತಿ ನೀಡಿ, ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.
ವಿಜಯ್ ರಂಜನ್ ಸಿಂಗ್, ಪ್ರಾದೇಶಿಕ ಆಯುಕ್ತ ದೆಹಲಿ ಇವರಿಗೆ ಎಪಿಸಿಸಿಎಫ್ ಹುದ್ದೆಗೆ ಬಡ್ತಿ ನೀಡಲಾಗಿದೆ. ಆರ್.ರವಿಶಂಕರ್ ಅವರಿಗೆ
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಾಚಿ ಗಂಗ್ವಾರ್‌ಗೆ ಅರಣ್ಯ ಸಂರಕ್ಷಣಾಧಿಕಾರಿ, ಬಸವರಾಜ್ ಪಾಟೀಲರಿಗೆ ಮುಖ್ಯ ಅರಣ್ಯ
ಸಂರಕ್ಷಣಾಧಿಕಾರಿಯಾಗಿ ಬಡ್ತಿ ನೀಡಲಾಗಿದೆ.
ತಕತ್ ಸಿಂಗ್ ರಣಾವತ್, ಕೆ.ವಿ.ವಸಂತರೆಡ್ಡಿ, ಡಾ.ಮಾಲತಿ ರೆಡ್ಡಿ, ಡಾ.ರಮೇಶ್‌ಕುಮಾರ್, ಎಂ.ವಿ.ಅಮರ್‌ನಾಥ್, ಶಿವರಾಮಬಾಬು ಅವರಿಗೆ ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಹುದ್ದೆಗೆ ಬಡ್ತಿ ನೀಡಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.