ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ತಲಾ 50 ಆಸ್ತಿ ಮಾಲೀಕರ ಹೆಸರನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯನ್ನು ದಂಡ ಹಾಗೂ ಬಡ್ಡಿ ಇಲ್ಲದೆ ಪಾವತಿಸುವ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಫೆಬ್ರುವರಿಯಲ್ಲಿ ಜಾರಿಯಾಗಿದ್ದ ಒಟಿಎಸ್ ಯೋಜನೆ ಜುಲೈ 31ರಂದು ಕೊನೆಗೊಂಡಿತ್ತು. ವಿಸ್ತರಣೆಯಾಗಿ ಒಂದು ತಿಂಗಳಾದರೂ ಆಸ್ತಿ ಸಂಗ್ರಹದಲ್ಲಿ ಹೆಚ್ಚಳ ಕಂಡು ಬಂದಿಲ್ಲ. ಹೀಗಾಗಿ, ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಹೆಸರನ್ನು ಸಾರ್ವಜನಿಕ ಗೊಳಿಸಲಾಗಿದೆ.

ಬಿಬಿಎಂಪಿಯ ಪ್ರತಿ ವಲಯದಲ್ಲೂ ಅತಿಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿ ಕೊಂಡಿರುವ ತಲಾ 50 ಆಸ್ತಿ ಮಾಲೀಕರ ಹೆಸರನ್ನು ಪಾಲಿಕೆಯ ವೆಬ್‌ಸೈಟ್ https://bbmptax.karnataka.gov.in/documents/DefaulterslistZones1.pdf ಪ್ರಕಟಿಸ ಲಾಗಿದೆ. ಅಲ್ಲದೆ, ಪುನರ್ ವಿಮರ್ಶೆ ಮಾಡಿದ ನಂತರ ಅತಿಹೆಚ್ಚು ಬಾಕಿ ಉಳಿಸಿಕೊಂಡಿರುವ ತೆರಿಗೆದಾರರ ಮಾಹಿತಿಯನ್ನೂ ಪ್ರಕಟಿಸಲಾಗಿದೆ.

2024ರ ಆಗಸ್ಟ್ 1ರಂತೆ 3,04,810 ಆಸ್ತಿಗಳಿಂದ ₹831.53 ಕೋಟಿ ತೆರಿಗೆ ಹಿಂಬಾಕಿ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.