ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ಶೈಕ್ಷಣಿಕ ಜಿಲ್ಲೆಗಳು ಈ ಬಾರಿ ಉತ್ತಮ ಸಾಧನೆ ಮಾಡಿವೆ.

ಕಳೆದ ಬಾರಿ 6ನೇ ಸ್ಥಾನದಲ್ಲಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯು ಈ ಬಾರಿ 3ನೇ ಸ್ಥಾನಕ್ಕೆ ಜಿಗಿದರೆ, ಬೆಂಗಳೂರು ಉತ್ತರ ಜಿಲ್ಲೆಯು 7ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದೆ.

ಕಾಲೇಜು ಶಿಕ್ಷಣ ಇಲಾಖೆಯು ಮಂಗಳವಾರ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ದಕ್ಷಿಣ ಜಿಲ್ಲೆಯ ಫಲಿತಾಂಶವು ಶೇ 85.36 ಆಗಿದ್ದು, ಕಳೆದ ಬಾರಿ ಶೇ 89.57 ಇತ್ತು. ಅದೇ ರೀತಿ ಉತ್ತರ ಜಿಲ್ಲೆಯ ಫಲಿತಾಂಶವು ಶೇ 83.31 ಆಗಿದ್ದು, ಕಳೆದ ಬಾರಿ ಶೇ 88.67 ಇತ್ತು.

ಅಗ್ರ 10ರೊಳಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ಸ್ಥಾನ ದೊರೆತಿದೆ. ಶೇ 79.70 ಫಲಿತಾಂಶದೊಂದಿಗೆ ಎಂಟನೇ ಸ್ಥಾನಕ್ಕೇರಿದೆ. ಕಳೆದ ವರ್ಷ ಶೇ 87.55 ಫಲಿತಾಂಶದೊಂದಿಗೆ ಹತ್ತನೇ ಸ್ಥಾನದಲ್ಲಿತ್ತು.

ಪಿಇಎಸ್ ಪಿಯು ಕಾಲೇಜು: ನಗರದ ಪಿಇಎಸ್ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗದ 139 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಎಸ್.ಪ್ರಜ್ವಲ್ (593), ಬಿ.ಎಲ್.ಕಿಶನ್ (592), ವಿ.ದೀಕ್ಷಾ (588), ಧ್ಯಾನ ಎಸ್.ರಾವ್ (583), ಐಶ್ವರ್ಯಾ ಎಂ.ರಾಯ್ಕರ್(581) ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 128 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಬಿ.ಎಸ್.ಪ್ರಿಯಾಂಕಾ (592), ಎ.ಭುವನ್ (591)., ನೇಹಾ ಯು. ಭಟ್ (590), ಚಂದನಾ ಯು. (590), ಎ.ರೋಷಣಿ (590) ಅಂಕ ಗಳಿಸಿದ್ದಾರೆ.

ದೀಕ್ಷಾ ವೇದಾಂತು ಕಾಲೇಜು: ದೀಕ್ಷಾ ವೇದಾಂತು ಕಾಲೇಜಿನ 13 ವಿದ್ಯಾರ್ಥಿಗಳು ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದ 11 ವಿದ್ಯಾರ್ಥಿಗಳು ಮತ್ತು ವಾಣಿಜ್ಯ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದ ಸುಘೋಷ್ ಪ್ರಶಾಂತ್ ಹೆಗಡೆ, ನೀತಿ ಹೊಳ್ಳ 600ಕ್ಕೆ 595 ಅಂಕಗಳನ್ನು ಗಳಿಸಿ ಐದನೇ ಶ್ರೇಯಾಂಕ ಪಡೆದಿದ್ದಾರೆ.

ಸಿ.ಚಿನ್ಮಯಿ ಚಿತ್ರಕಿಗೆ ಶೇ 98

ರೇವಾ ವಿಶ್ವವಿದ್ಯಾಲಯದ ಅಂಧ ವಿದ್ಯಾರ್ಥಿನಿ ಸಿ.ಚಿನ್ಮಯಿ ಚಿತ್ರಕಿ ಅವರು ದ್ವಿತೀಯ ಪಿಯುಸಿಯಲ್ಲಿ ಶೇಕಡ 98 ಅಂಕ ಗಳಿಸಿದ್ದಾರೆ. ಮನೋವಿಜ್ಞಾನ ವಿಷಯದಲ್ಲಿ ಶೇ 100 ಅಂಕ ಗಳಿಸಿದ್ದಾರೆ. ಯಲಹಂಕದ ಮಾತೃ ಎಜುಕೇಷನಲ್ ಟ್ರಸ್ಟ್ (ಅಂಧರ ಮತ್ತು ಇತರ ಅಂಗವಿಕಲರು) ಚಿನ್ಮಯಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಅಸೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಪೀಣ್ಯ ದಾಸರಹಳ್ಳಿ: ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಅಸೆಂಟ್ ಪಿಯು ಕಾಲೇಜಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 98.47 ಫಲಿತಾಂಶ ಬಂದಿದೆ.

ಕಾಲೇಜಿನಲ್ಲಿ 70 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 150 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಾಚಾರ್ಯ ಬಿ.ಎಂ.ವೆಂಕಟೇಶ್ ತಿಳಿಸಿದರು.

ವಿದ್ಯಾರ್ಥಿನಿ ಸ್ಪಂದನ ಬಿ. (ವಾಣಿಜ್ಯ ವಿಭಾಗ) ಶೇ.98, ಪವಿತ್ರ ಜಿ. (ವಿಜ್ಞಾನ ವಿಭಾಗ) ಶೇ.97.17, ಖುಷಿ ಬಿ. ಶೇ 96.83, ತೇಜಸ್ವಿನಿ ಎಂ (ವಿಜ್ಞಾನ ವಿಭಾಗ) ಶೇ.95.33 ಅಂಕ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.