ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಯಮ ಉಲ್ಲಂಘನೆ: ‘ಪಬ್ಲಿಕ್‌ ಐ’ ನಿಗಾ’

Last Updated 30 ಸೆಪ್ಟೆಂಬರ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ನಿಗಾ ಇರಿಸಲು ‘ಪಬ್ಲಿಕ್ ಐ’ ಜಾಲತಾಣ, ಆ್ಯಪ್‌ ರೂಪಿಸಿರುವ ಪೊಲೀಸ್‌ ಇಲಾಖೆ, ಉಲ್ಲಂಘನೆ ಬಗ್ಗೆ ಮಾಹಿತಿ ನೀಡುವಂತೆ ಜನರನ್ನು ಕೋರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಸಂಚಾರ ನಿಯಮಗಳನ್ನು ಯಾರಾದರೂ ಉಲ್ಲಂಘಿಸುವುದು ಕಂಡರೆ, ಫೋಟೊ ತೆಗೆದು ಕಳುಹಿಸಿ. ತಪ್ಪಿತಸ್ಥರಿಗೆ ದಂಡ ವಿಧಿಸಲಾಗುವುದು’ ಎಂದು ಹೇಳಿದ್ದಾರೆ.

‘ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ‘ಪಬ್ಲಿಕ್‌ ಐ’ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಅದರಲ್ಲೇ ಫೋಟೊ ಅಪ್‌ಲೋಡ್‌ ಮಾಡಿ. ನೀವು ಕಳುಹಿಸಿದ ಫೋಟೊವನ್ನು ಪರಿಶೀಲಿಸಿ ತಪ್ಪಿತಸ್ಥರಿಗೆ ದಂಡದ ಇ–ಚಲನ್ ಕಳುಹಿಸಲಾಗುವುದು’ ಎಂದಿದ್ದಾರೆ.

‘ಫೋಟೊ ಕಳುಹಿಸಿದ ವ್ಯಕ್ತಿಯ ವಿವರವನ್ನು ಗೋಪ್ಯವಾಗಿರಿಸಲಾಗುವುದು. ಇಂದೇ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡು ನೀವೂ ನಾಗರಿಕ ಪೊಲೀಸ್‌ ಆಗಿ’ ಎಂದು ಭಾಸ್ಕರ್‌ ರಾವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT