ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಯ್ಸಳ ಪೊಲೀಸ್‌ ವಿರುದ್ಧ ಕಿಡಿಕಾರಿದ ಸಾರ್ವಜನಿಕ: ವಿಡಿಯೊ ವೈರಲ್

Last Updated 30 ಸೆಪ್ಟೆಂಬರ್ 2018, 6:43 IST
ಅಕ್ಷರ ಗಾತ್ರ

ಬೆಂಗಳೂರು:ವಯ್ಯಾಲಿಕಾವಲ್‌ನ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಬಳಿ ಹೊಯ್ಸಳ ಗಾಡಿ ನಿಲ್ಲಿಸಿಕೊಂಡಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದುಸಾರ್ವಜನಿಕರೊಬ್ಬರು ಪೊಲೀಸರ ವಿರುದ್ಧ ಕಿಡಿಕಾರಿದ ವಿಡಿಯೊ ವೈರಲ್‌ ಆಗಿದೆ.

ಶನಿವಾರ ಇಲ್ಲಿಗೆತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರು ಪೊಲೀಸ್‌ ವಾಹನ ರಸ್ತೆಯಲ್ಲಿ ನಿಂತಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರು ವಾಹನ ತೆಗೆಯದಿದ್ದರಿಂದ ಸಿಟ್ಟಿಗೆದ್ದು ಅವರುವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

‘ನಮಗೆ ಪಾಯಿಂಟ್‌ ಕೊಟ್ಟಿರುವುದೇ ಇಲ್ಲಿ. ಹಾಗಾಗಿ ವಾಹನ ನಿಲ್ಲಿಸಿಕೊಂಡಿದ್ದೇವೆ. ವಿಡಿಯೊ ಮಾಡಿದಾಕ್ಷಣ ಏನೂ ಆಗುವುದಿಲ್ಲ. ತಪ್ಪು ಮಾಡಿದರಷ್ಟೇ ಹೆದರಿಕೊಳ್ಳಬೇಕು. ಏನಾದರೂ ಮಾಡಿಕೊ’ ಎಂದು ಎಎಸ್‌ಐ ರಾಮುವಿಡಿಯೊದಲ್ಲಿ ಹೇಳಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದಎಎಸ್‌ಐ ರಾಮು, ‘ನಮಗೆ ಒಂದೊಂದು ತಾಸು ಒಂದೊಂದು ಪಾಯಿಂಟ್‌ ಅಂತ ಕೊಟ್ಟಿರುತ್ತಾರೆ. ನನಗೆ ಆಗ ಇದ್ದಿದ್ದು ದೇವಸ್ಥಾನದ ಪಾಯಿಂಟ್‌. ದಟ್ಟಣೆ ಉಂಟು ಮಾಡುವಂತೆ ವಾಹನ ನಿಲ್ಲಿಸಿಕೊಂಡಿರಲಿಲ್ಲ. ನಮ್ಮ ವಾಹನದ ಪಕ್ಕದಲ್ಲಿ ಮೊತ್ತೊಂದು ಕಾರು ಹೋಗುವಷ್ಟು ಜಾಗ ಇದೆ. ವಿಡಿಯೊದಲ್ಲಿ ನೀವೇ ನೋಡಬಹುದು’ ಎಂದರು.

‘ದೇವಸ್ಥಾನದ ಕೊನೆಯಲ್ಲಿ ನಾವು ವಾಹನ ನಿಲ್ಲಿಸಿಕೊಂಡಿದ್ದೆವು. ಆ ರಸ್ತೆ ಅಲ್ಲಿಗೆ ಪೂರ್ಣಗೊಳ್ಳುತ್ತದೆ. ಹೀಗಾಗಿ ಭಾರಿ ದಟ್ಟಣೆಯಾಗುವಷ್ಟು ವಾಹನಗಳು ಅಲ್ಲಿ ಓಡಾಡುವುದಿಲ್ಲ. ಹೇಗೆಂದರೆ ಹಾಗೆ ನಾವು ವಾಹನವನ್ನು ನಿಲ್ಲಿಸುವುದಿಲ್ಲ. ಮುಖ್ಯ ರಸ್ತೆಯಲ್ಲಿ ಹಾಗೆ ನಿಲ್ಲಿಸಿದ್ದರೆ, ಅವರು ಹೇಳುವುದು ಸರಿ. ಒಳ ರಸ್ತೆಗಳಲ್ಲಿ ನಿಲ್ಲಿಸಿದಕ್ಕೆ ಅವರುಮನಸ್ಸಿಗೆ ಬಂದಂತೆ ವರ್ತಿಸಿದರೆ, ನಾವೇನು ಮಾಡುವುದು. ಪೊಲೀಸರು ದರ್ಪ ತೋರುತ್ತಾರೆ ಎನ್ನುವ ಭಾವನೆ ಜನರಲ್ಲಿದೆ. ಬೈಯುತ್ತಾರೆ ಏನು ಮಾಡುವುದು. ಜನರಿಗೆ ತೊಂದರೆಯಾಗಬಾರದು ಎಂದೇ ನಾವುಅಲ್ಲಿ ಕೆಲಸ ಮಾಡುತ್ತಿರುತ್ತೇವೆ’ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊಗೆ ಸಾಕಷ್ಟು ಮಂದಿ ಟೀಕಿಸಿದ್ದು, ಪೊಲೀಸರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT