ರಾಧಾಕೃಷ್ಣ ಮೊಬೈಲ್ ಕ್ಯಾಂಟೀನ್ಗೆ ಚಾಲನೆ

ಬೆಂಗಳೂರು: ಬಡವರ ಹಸಿವು ನೀಗಿಸುವ ಜತೆಗೆ ಸ್ವಾದಿಷ್ಟ ಮತ್ತು ಉತ್ತಮ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಬಸವನಗುಡಿಯಲ್ಲಿ ‘ರಾಧಾಕೃಷ್ಣ ಫುಡ್’ ಮೊಬೈಲ್ ಕ್ಯಾಂಟೀನ್ಗಳನ್ನು ಆರಂಭಿಸಲಾಗಿದೆ.
ಶಾಸಕ ರವಿಸುಬ್ರಮಣ್ಯ, ಮಾಜಿ ಉಪಮಹಾಪೌರ ಲಕ್ಷ್ಮೀನಾರಾಯಣ್ ಮತ್ತು ರಾಧಾಕೃಷ್ಣ ಫುಡ್ ಕ್ಯಾಂಟೀನ್ ಮಾಲೀಕರಾದ ಗಿರೀಶ್, ಲೋಕೇಶ್ ಅವರು ಮೊಬೈಲ್ ಕ್ಯಾಂಟೀನ್ಗಳಿಗೆ ಸೋಮವಾರ ಚಾಲನೆ ನೀಡಿದರು.
‘ಕೇವಲ ₹10ಗೆ ಊಟ ಮತ್ತು ತಿಂಡಿ ನೀಡಲಾಗುತ್ತಿದೆ. ಬಡವರ ಪಾಲಿಗೆ ಈ ಮೊಬೈಲ್ ಕ್ಯಾಂಟೀನ್ಗಳು ಆಸರೆಯಾಗಲಿವೆ’ ಎಂದು ಮಾಲೀಕರಾದ ಗಿರೀಶ್ ಮತ್ತು ಲೋಕೇಶ್ ತಿಳಿಸಿದ್ದಾರೆ.
‘ನಗರ ಪ್ರದೇಶದಲ್ಲಿ ಯಾವುದೇ ಹೋಟೆಲ್ನಲ್ಲಿ ತಿಂಡಿ ಸೇವಿಸಲು ₹70ರಿಂದ ₹100 ಬೇಕು. ಆದರೆ, ರಾಧಾಕೃಷ್ಣ ಫುಡ್ ಮೊಬೈಲ್ ಕ್ಯಾಂಟೀನ್ನಲ್ಲಿ ₹10ರೂಪಾಯಿಗೆ ಹೊಟ್ಟೆ ತುಂಬುವಷ್ಟು ತಿಂಡಿ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
‘ಮೂರು ಮೊಬೈಲ್ ಕ್ಯಾಂಟೀನ್ಗಳು ಬಡವರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ನಿಲ್ಲುತ್ತವೆ. ಮುಂಬರುವ ದಿನಗಳಲ್ಲಿ 15ಕ್ಕೂ ಹೆಚ್ಚು ಮೊಬೈಲ್ ಫುಡ್ ಕ್ಯಾಂಟೀನ್ಗಳನ್ನು ತೆರೆಯುವ ಉದ್ದೇಶ ಇದೆ’ ಎಂದು ತಿಳಿಸಿದ್ದಾರೆ.
‘ಇಡ್ಲಿ, ಚಿತ್ರಾನ್ನ, ಪುಲಾವ್, ಮೊಸರನ್ನ, ತರಕಾರಿ ಬಾತ್, ಉಪ್ಪಿಟ್ಟು, ಕೇಸರಿಬಾತ್ ನಮ್ಮಲ್ಲಿ ವಿಶೇಷ. ಬಡವರ ಹೊಟ್ಟೆ ಹಸಿವು ನೀಗಿಸಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿದೆ. ನಗರ ಪ್ರದೇಶದಲ್ಲಿ ಬೇಡಿಕೆ ಹೆಚ್ಚಿದಂತೆ ಮತ್ತು ಬಡವರು ವಾಸಿಸುವ ಪ್ರದೇಶಗಳಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲಾಗುವುದು. ರಾಧಾಕೃಷ್ಣ ಫುಡ್ ಕ್ಯಾಂಟೀನ್ ವತಿಯಿಂದ 5ಕ್ಕೂ ಹೆಚ್ಚು ಅನಾಥ ಮಕ್ಕಳ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ವೃದ್ಧಾಶ್ರಮಕ್ಕೆ ಉಚಿತವಾಗಿ ಪ್ರತಿದಿನ ತಿಂಡಿ
ವಿತರಿಸಲಾಗುತ್ತಿದೆ’ ಎಂದು ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.