ಸೋಮವಾರ, ಆಗಸ್ಟ್ 26, 2019
28 °C
ಮಳೆಯಲಿ ಜೊತೆಯಾದೆ ನೀನು

ಮಳೆಯಲಿ ಜೊತೆಯಲಿ..

Published:
Updated:
Prajavani

ಬಿರು ಬಿಸಿಲಿನಲ್ಲಿ ನೆರಳಾಗುವ ಹಾಗೆ, ಮಳೆಯಲೂ ನಿನ್ನದೆ ಆಸರೆ! ಅದಕ್ಕೆಂದೆ ನಿನ್ನ ಬಯಸುವುದು. ನಾನಷ್ಟೇ ಅಲ್ಲ ಎಲ್ಲರೂ.. ಮಳೆ ಇರಲಿ, ಬಿಸಿಲಿರಲಿ ಯಾರು ಜೊತೆಯಾಗದಿದ್ದರು ನೀನು ಜೊತೆಯಾಗುತ್ತಿಯಾ. ಮಳೆ ಹನಿ ಮೈಮೇಲೆ ಬೀಳದಂತೆ ನೋಡಿಕೊಳ್ಳುತ್ತಿಯಾ. ಬೆಚ್ಚನೆಯ ಹೊದಿಕೆಯೂ ಆಗುವ ನೀನು ನನಗಿಷ್ಟ. ತಲೆ ಮೇಲೆ ಒಂದು ಹನಿ ಬಿದ್ದರೆ ಶೀತವಾಗುವುದನ್ನು ತಪ್ಪಿಸುವೆ ನೀನು. ನನ್ನ ಹಿತವನ್ನಷ್ಟೆ ಕಾಯದೆ ಬೇರೆಯವರ ಹಿತವನ್ನು ಬಯಸುತ್ತಿಯಲ್ಲ, ಆದರೆ ನಿನಗೇ ಏನಾದರು ಆದರೆ ಏನು ಮಾಡುವೆ? ಎಲ್ಲರನ್ನು ಅಷ್ಟೊಂದು ಪ್ರೀತಿಸುವ ನಿನ್ನನ್ನು ಪ್ರೀತಿಸುವವರಾರು..?

ನಾನು ಮನೆಯಿಂದ ಹೊರ ಬರುವ ಸಮಯದಲ್ಲಿ ಮಳೆ ಸುರಿದರೆ ಜೊತೆಯಾಗುವೆ. ಇಲ್ಲಿಯೇ ಕುಳಿತುಕೊ ಎಂದು ಕಟ್ಟಾಜ್ಞೆ ಮಾಡಿ ಹೋದರೆ ನಾನು ಬರುವವರೆಗೂ ಅಲ್ಲಿಯೇ ಕುಳಿತುಕೊಳ್ಳುತ್ತಿಯಲ್ಲ! ನಾನಂದ್ರೆ ನಿನಗೆ ಅಷ್ಟೊಂದು ಇಷ್ಟಾನಾ..! ಹಾಗೆ ಎಲ್ಲರನ್ನು ಪ್ರೀತಿಸಿ ಆಸರೆ ಕೊಡುತ್ತಿಯಲ್ಲ ನಿನಗೆ ಯಾರು ಸಾಟಿ ಇಲ್ಲ ಬಿಡು. ಮಳೆ ಹನಿ ಮೈಮೇಲೆ ಬಿದ್ದರೆ ಚಳಿ! ಕೆಲವೊಬ್ಬರಿಗೆ ಮಳೆಯಲಿ ನೆನೆಯುವ ಆಸೆ ಇನ್ನು ಕೆಲವರಿಗೆ ಮೈಮೇಲೆ ಹನಿ ಬಿದ್ದರೆ ಜೀವ ಹೋಗುವಂತೆ ಆಡುತ್ತಾರೆ. ಅವರಿಗೆಲ್ಲ ಆಸರೆ ಕೊಡುತ್ತಿಯಲ್ಲ, ನಿನಗೂ ಚಳಿ ಆಗುವುದಿಲ್ಲವೇ, ಮಳೆ ನೀರಿಗೆ ನೆನೆಯುವುದಿಲ್ಲವೆ ಹೇಳು.. ಎಲ್ಲರಿಗೂ ಮಳೆಯಲ್ಲಿ ರಕ್ಷಣೆ ಕೊಡುವ ನೀನು ಯಾರಿಂದ ಆಸರೆಯನ್ನು ಪಡೆದುಕೊಳ್ಳುತ್ತಿಯಾ ಹೇಳು. ನನ್ನ ‘ಕೊಡೆ’ಯಾ.. ನಿನಂದ್ರೆ ನನಗೆ ತುಂಬಾ ಇಷ್ಟ.

-ಸಂಗೀತಾ ಗೊಂಧಳೆ

Post Comments (+)