ರಾಜರಾಜೇಶ್ವರಿನಗರ: ಬೀದಿಬದಿ ವ್ಯಾಪಾರಿಗಳು, ಕಟ್ಟಡಕಾರ್ಮಿಕರು, ಕೂಲಿ ಕಾರ್ಮಿಕರು, ಮನೆಗೆಲಸದವರು, ಆಟೋ ಚಾಲಕರು ಸೇರಿದಂತೆ ನೂರಾರು ಜನರಿಗೆ ಕಂಬಳಿ, ಸೀರೆ, ಸಮವಸ್ತ್ರ, ವಿವಿಧ ಸವಲತ್ತುಗಳನ್ನು ಶಾಸಕ ಎಸ್.ಟಿ.ಸೋಮಶೇಖರ್ ವಿತರಿಸಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ವತಿಯಿಂದ ಯಶವಂತಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾರ್ಮಿಕರ ಸಮಾವೇಶದಲ್ಲಿ ಸವಲತ್ತು ವಿತರಿಸಲಾಯಿತು.

‘ನಿಮಗೆ ಎಲ್ಲ ರೀತಿಯ ಸಹಕಾರ, ಬೆಂಬಲ, ಪ್ರೋತ್ಸಾಹ, ಸವಲತ್ತು ದೊರಕಿಸಿಕೊಡುತ್ತೇನೆ. ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತೇವೆ’ ಎಂದು ಸೋಮಶೇಖರ್ ಹೇಳಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ಬೆಂಗಳೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಶಂಕರ್ ಮಾತನಾಡಿ, ‘ನಗರ ಪ್ರದೇಶದ ಜನರಿಗೆ ಸವಲತ್ತು ನೀಡಲಾಗುತ್ತಿದ್ದು. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೂ ಕಾರ್ಮಿಕ ವಿಭಾಗದ ವತಿಯಿಂದ ಸವಲತ್ತು ವಿತರಿಸಿಲಾಗುವುದು’ ಎಂದರು.

ದಲಿತ ಸಂಘರ್ಷ ಸಮಿತಿಯ ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೊನ್ನಯ್ಯ, ಕೆಂಗೇರಿ ರೈತ ಸಹಕಾರ ಬ್ಯಾಂಕ್ ನಿರ್ದೇಶಕ ವೆಂಕಟಾಚಲಪತಿ, ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಅಪ್ಪಾಜಿ, ವಾರ್ಡ್ ಅಧ್ಯಕ್ಷ ಪ್ರಭು, ಕಾರ್ಮಿಕ ವಿಭಾಗದ ಅಧ್ಯಕ್ಷೆ ಪದ್ಮಾ, ಸೈಯದ್ ಅಹಮದ್, ಜಯಪ್ರಕಾಶ್ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಂ. ಶಿವಕುಮಾರ್, ಭಾರತ ಸೇವಾದಳದ ಅಧ್ಯಕ್ಷ ಡಿ.ವಿ.ರುದ್ರಮೂರ್ತಿ, ಗಾಂಧಿ ನಗರ, ಲಕ್ಷ್ಮಿದೇವಸ್ಥಾನದ ನಾರಾಯಣಸ್ವಾಮಿ, ಅಖಿಲ ಕರ್ನಾಟಕ ಶಿವಕುಮಾರ ಸ್ವಾಮಿ ಭಕ್ತವೃಂದ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಎಸ್.ಮಂಜುನಾಥ ಸ್ವಾಮಿ ಉಪಸ್ಥಿತದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.