ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರಿಗೆ ಆ.16 ರಿಂದ 31ರ ತನಕ ರಾಜಭವನ ಪ್ರವೇಶ

Last Updated 7 ಆಗಸ್ಟ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜಭವನ ನೋಡಲು ಬಯಸುವವರಿಗೆರಾಜ್ಯಪಾಲ ವಜುಭಾಯಿ ವಾಲಾ ಅಪೂರ್ವ ಅವಕಾಶ ಕಲ್ಪಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇದೇ 16 ರಿಂದ 31 ರವರೆಗೆ ಸಾರ್ವಜನಿಕ ವೀಕ್ಷಣೆಗೆ ರಾಜಭವನ ತೆರೆದಿರುತ್ತದೆ. ಸಂಜೆ 4 ರಿಂದ 6.30ರ ಅವಧಿಯಲ್ಲಿ ರಾಜಭವನ ನೋಡಬಹುದು.

ಇದಕ್ಕಾಗಿ ಆಸಕ್ತರು ರಾಜಭವನದ ವೆಬ್‌ಸೈಟ್‌ http://rajbhavan.kar.nic.in ನಲ್ಲಿ ಹೆಸರು ನೋಂದಣಿ ಮಾಡಬೇಕು. ಭೇಟಿ ನೀಡುವುದಕ್ಕೆ ಐದು ದಿನಗಳ ಮೊದಲು ಹೆಸರು ನೋಂದಣಿ ಮಾಡುವುದು ಕಡ್ಡಾಯ. ನೋಂದಣಿ ಬಳಿಕ ಇಮೇಲ್‌ ಅಥವಾ ಎಸ್‌ಎಂಎಸ್‌ ಮೂಲಕ ಪ್ರವೇಶವನ್ನು ಖಚಿತಪಡಿಸಲಾಗುವುದು ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.

ರಾಜಭವನ ವೀಕ್ಷಿಸಲು ಬರುವವರನ್ನು ತಂಡಗಳಲ್ಲಿ ಬಿಡಲಾಗುವುದು. ಪ್ರತಿ ತಂಡದಲ್ಲಿ 30 ಜನರಿಗೆ ಅವಕಾಶ ಇದೆ. ಅವರು 20 ರಿಂದ 30 ನಿಮಿಷಗಳ ಅವಧಿಯಲ್ಲಿ ರಾಜಭವನ ನೋಡಿ ಹಿಂದಕ್ಕೆ ಬರಬೇಕು. ವೀಕ್ಷಣೆಗೆ ನೀಡಿದ ಸಮಯಕ್ಕಿಂತ 15ನಿಮಿಷ ಮೊದಲೇ ಸ್ಥಳದಲ್ಲಿರಬೇಕು. ಭಾರತೀಯರು ಗುರುತಿನ ಚೀಟಿಯನ್ನು ತರಬೇಕು. ವಿದೇಶಿಯರು ಪಾಸ್‌ಪೋರ್ಟ್‌ ಮತ್ತು ವಿಸಾವನ್ನು ಸ್ಕ್ಯಾನ್‌ ಮಾಡಿ ಪ್ರತಿ ಸಲ್ಲಿಸಬೇಕು.ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT