ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಶ್ರಮದಲ್ಲಿ ಚಾತುರ್ಮಾಸ್ಯ

Last Updated 14 ಜುಲೈ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಗಿರಿನಗರದ ರಾಮಾಶ್ರಮದಲ್ಲಿ ಮಂಗಳವಾರದಿಂದ (ಜು.16) ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ 26ನೇ ಚಾತುರ್ಮಾಸ್ಯ ಆರಂಭವಾಗಲಿದೆ.

ಚಾತುರ್ಮಾಸ್ಯ ಅಂಗವಾಗಿ ಸೋಮವಾರ ಶ್ರೀಗಳು ಪುರಪ್ರವೇಶ ಮಾಡಲಿದ್ದಾರೆ.ಈ ಬಾರಿಯ ಚಾತುರ್ಮಾಸ್ಯಕ್ಕೆ ರಾಮಾಯಣ ಚಾತುರ್ಮಾಸ್ಯ ಎಂದು ಹೆಸರಿಸಲಾಗಿದ್ದು, ಸೆ.14ರವರೆಗೆ ನಡೆಯಲಿದೆ. ಜು.16ರಂದು ಪುನರ್ವಸು ಭವನ ಲೋಕಾರ್ಪಣೆ, ಜು.19ಕ್ಕೆ ಶ್ರೀಗಳ ವರ್ಧಂತಿ, ಜು.23ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆ.2ರಂದು ಗಣೇಶ ಚತುರ್ಥಿ ನಡೆಯಲಿದೆ. ಸೆ.14ರಂದು ಸೀಮೋಲ್ಲಂಘನೆ ಆಯೋಜಿಸಲಾಗಿದ್ದು, ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರತಿ ದಿನ ಶ್ರೀಗಳಿಂದ ಧಾರಾ ರಾಮಾಯಣ ಪ್ರವಚನ ಇರುತ್ತದೆ ಎಂದು ಚಾತುರ್ಮಾಸ್ಯ ಕ್ರಿಯಾಸಮಿತಿ ಅಧ್ಯಕ್ಷ ರಮೇಶ್ ಕೋರಮಂಗಲ ಮತ್ತು ಕಾರ್ಯದರ್ಶಿ ವಾದಿರಾಜ ಸಾಮಗ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT