ಶುಕ್ರವಾರ, ಸೆಪ್ಟೆಂಬರ್ 18, 2020
28 °C

ರಾಮದೇವರ ಬೆಟ್ಟದಲ್ಲಿ ಕರಡಿಗಳು ಗ್ರಾಮದ ಜನರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ರಾಮದೇವರ ಬೆಟ್ಟದ ತಪ್ಪಲಿನಲ್ಲಿ ಸೋಮವಾರ ಬೆಳಿಗ್ಗೆ ಎರಡು ಕರಡಿಗಳು ಕಾಣಿಸಿಕೊಂಡು ರಾಯರಪಾಳ್ಯ, ರಾಮೇನಹಳ್ಳಿ, ಚನ್ನೋಹಳ್ಳಿ ಹಾಗೂ ಹೊಸನಿಜಗಲ್ ಗ್ರಾಮದ ಜನರಲ್ಲಿ ಆತಂಕ ಮೂಡಿಸಿವೆ.

‘ಕರಡಿಗಳು ಸಾಮಾನ್ಯವಾಗಿ ಬೆಳಿಗ್ಗೆ ಹೊತ್ತಲ್ಲಿ ಕಾಣಿಸಿಕೊಳ್ಳುವುದಿಲ್ಲ. ರಾತ್ರಿ ವೇಳೆ ತಮ್ಮ ಆಹಾರ ಹುಡುಕಿಕೊಂಡು ಹಗಲಲ್ಲಿ ಗುಡ್ಡದ ಗವಿಯಲ್ಲಿ ಇರುತ್ತವೆ.

ಬೇರೆ ಕಡೆಯಿಂದ ಬಂದ ಸಂದರ್ಭದಲ್ಲಿ ಉಳಿದುಕೊಳ್ಳುವಂತಹ ಜಾಗ ಸಿಗದಿದ್ದಾಗ ಮಾತ್ರ ಹಗಲಲ್ಲಿ ಕಾಣಿಸಿಕೊಳ್ಳುತ್ತವೆ’ ಎಂದು ನೆಲಮಂಗಲದ ವಲಯ ಅರಣ್ಯಾಧಿಕಾರಿ ಚೇತನ್ ಹೇಳಿದರು.

‘ರಾಮದೇವರ ಕಾಡಿಗೆ ಹೊಂದಿಕೊಂಡಂತೆ ತುಮಕೂರು ಭಾಗದ ಅಲ್ಪ ಕಾಡು ಸೇರಿರುವುದಿಂದ ಈ ಕರಡಿಗಳು ಆ ಕಡೆಯಿಂದ ಬಂದಿರಬಹುದು. ಅರಣ್ಯ ವೀಕ್ಷಕರಿಗೆ ಅವುಗಳ ಮೇಲೆ ನಿಗಾ ವಹಿಸಲು ಹೇಳಲಾಗಿದೆ. ಜನರಿಗೆ ತೊಂದರೆಯಾದರೆ ಅವುಗಳನ್ನು ಹಿಡಿಯುವ ಪ್ರಯತ್ನ ಮಾಡಲಾಗುವುದು’ ಎಂದರು.

‘ಸುಮಾರು ಎರಡು ತಿಂಗಳಿಂದ ಕರಡಿಗಳು ಓಡಾಡುತ್ತಿವೆ. ರಾತ್ರಿ ವೇಳೆ ಆಹಾರ ಹುಡುಕಿಕೊಂಡು ಹೋಗುತ್ತಿದ್ದವು. ಈಗ ಹಗಲಲ್ಲಿಯೇ ಕಾಣಿಸಿರುವುದು ಸುತ್ತಮುತ್ತಲ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ’ ಎಂದು ರಾಯರಪಾಳ್ಯದ ವೆಂಕಟೇಶ್‌ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು