ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

M.S.ರಾಮಯ್ಯ ಸ್ಮರಣಾರ್ಥ ಯೋಜನೆ; 84 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

Published 30 ಏಪ್ರಿಲ್ 2024, 16:02 IST
Last Updated 30 ಏಪ್ರಿಲ್ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌ನಿಂದ 2023–24ನೇ ಸಾಲಿನಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿರುವ 84 ವಿದ್ಯಾರ್ಥಿಗಳಿಗೆ ‘ರಾಮಯ್ಯ ಸ್ಮಾರಕ ವಿದ್ಯಾರ್ಥಿವೇತನ’ವನ್ನು ವಿತರಿಸಲಾಯಿತು.

ರಾಮಯ್ಯ ಯೂನಿವರ್ಸಿಟಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಡಾ.ಎಂ.ಎಸ್. ರಾಮಯ್ಯ ಅವರ ಸ್ಮರಣಾರ್ಥವಾಗಿ ಈ ವಿದ್ಯಾರ್ಥಿವೇತನ ಯೋಜನೆಯನ್ನು ಪರಿಚಯಿಸಲಾಗಿದೆ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಈ ವರ್ಷದಿಂದ ಯೋಜನೆಯನ್ನು ಆರಂಭಿಸಲಾಗಿದೆ.

ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಮಾಡಿದ ಸಾಧನೆ, ಜೆಇಇ, ಕೆ–ಸಿಇಟಿ, ಸಿಎಟಿ, ಎಕ್ಸ್‌ಎಟಿ, ಎಂಎಟಿ ಪರೀಕ್ಷೆಗಳಲ್ಲಿ ಗಳಿಸಿದ ಶ್ರೇಯಾಂಕ, ಶೇಕಡಾವಾರು ಅಂಕ, ಜತೆಗೆ ಕ್ರೀಡೆಯಲ್ಲಿ ಮಾಡಿದ ಸಾಧನೆ ಪರಿಗಣಿಸಿ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ರಾಮಯ್ಯ ವಿಶ್ವವಿದ್ಯಾಲಯದ ಉಪಕುಲಪತಿ ಕುಲದೀಪ್‌ ಕುಮಾರ್‌ ರೈನಾ ಹೇಳಿದರು.

‘ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌ನ ಕುಲಪತಿ ಎಂ.ಆರ್. ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್, ಫಾರ್ಮಸಿ, ಪಿಸಿಯೋಥೆರಪಿ, ನರ್ಸಿಂಗ್, ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಕಾಮರ್ಸ್‌, ಕಾನೂನು, ಲೈಫ್‌ ಆ್ಯಂಡ್‌ ಅಲೈಡ್‌ ಹೆಲ್ತ್‌ ಸೈನ್ಸಸ್‌, ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌, ಶುದ್ಧ ವಿಜ್ಞಾನ ವಿಭಾಗದ 84 ವಿದ್ಯಾರ್ಥಿಗಳಿಗೆ ‘ರಾಮಯ್ಯ ಸ್ಮಾರಕ ವಿದ್ಯಾರ್ಥಿವೇತನ’ವನ್ನು ವಿತರಿಸಲಾಯಿತು’ ಎಂದು ಅವರು ತಿಳಿಸಿದರು.

ಗೋಕುಲ ಎಜುಕೇಷನ್‌ ಫೌಂಡೇಷನ್‌ (ವೈದ್ಯಕೀಯ) ಮುಖ್ಯಾಧಿಕಾರಿ ಎಂ.ಆರ್. ಶ್ರೀನಿವಾಸ್, ಉಪಕುಲಪತಿ (ಸಂಶೋಧನೆ) ಗೋವಿಂದ್ ಆರ್. ಕಡಂಬಿ, ಉಪಕುಲಪತಿ (ಆರೋ‌ಗ್ಯ ವಿಜ್ಞಾನ) ಡಾ. ಓಂಪ್ರಕಾಶ್ ಕರಬಂದ, ಕ್ವಾಲಿಟಿ ಅಶುರೆನ್ಸ್‌ ಆ್ಯಂಡ್‌ ಎಕ್ಸಲೆನ್ಸ್‌ನ ಪುಷ್ಪತಿನಾಥ್ ರಾಜ್ದಾನ್, ಶೈಕ್ಷಣಿಕ ವಿಭಾಗದ ಡೀನ್ ಮೇಧಾ ವೈ. ರಾವ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT