ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ | ಕುಶಾಲ್‌ ಎದುರು ಗೆದ್ದ ನಿಕೇತನ್‌

Published 21 ಮೇ 2024, 22:30 IST
Last Updated 21 ಮೇ 2024, 22:30 IST
ಅಕ್ಷರ ಗಾತ್ರ

ದಾವಣಗೆರೆ: ದಕ್ಷಿಣ ಕನ್ನಡ ಜಿಲ್ಲೆಯ ನಿಕೇತನ್‌ ಅಮಿನ್‌ ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ 8ನೇ ಶ್ರೇಯಾಂಕದ ಕುಶಾಲ್‌ ಆತ್ರೇಯ ಎದುರು ಗೆದ್ದರು.

ಮಂಗಳವಾರ ನಡೆದ 17 ವರ್ಷದೊಳಗಿನ ಬಾಲಕರ ವಿಭಾಗದ ಪಂದ್ಯದಲ್ಲಿ ನಿಕೇತನ್‌ 13-15, 15-11, 15-12 ರಿಂದ ಜಯಿಸಿದರು.ಬೆಂಗಳೂರಿನ ಎಸ್‌.ಹಿತೇಶ್‌ 6-15, 15-10, 17-15 ರಿಂದ ನಮನ್‌ ಅಣ್ವೇಕರ್‌ ಅವರನ್ನು ಸೋಲಿಸಿದರು.

ಇತರ ಪ್ರಮುಖ ಪಂದ್ಯಗಳಲ್ಲಿ ಬೆಂಗಳೂರಿನ ಸಾಕೇತ್‌ ಕೌಶಿಕ್‌ 15-11, 13-15, 15-12 ರಿಂದ ಶಿವೇಶ್‌ ಅರುಣಾಚಲಂ ಎದುರು, ಹಾಸನದ ಚಿನ್ಮಯ್‌ ಕೆ.ಗೌಡ 15-9, 15-4 ರಿಂದ ಅನಿರುದ್ಧ್‌ ಕಶ್ಯಪ್‌ ವಿರುದ್ಧ, ಚಾಮರಾಜನಗರದ ನೀಲೇಶ್‌ ಜಯರಾಜ್‌ 15-7, 15-11 ರಿಂದ ಉದ್ಧವ್‌ ಕೃಷ್ಣನ್‌ ಎದುರು ಗೆಲುವು ಕಂಡರು.

ಬಾಲಕಿಯರ ವಿಭಾಗದ ಪಂದ್ಯದಲ್ಲಿ ಬೆಂಗಳೂರಿನ ಲಕ್ಷ್ಯ ರಾಜೇಶ್‌ 15-8, 15-13 ರಿಂದ ಎಸ್‌.ಸ್ಮೃತಿ ಅವರನ್ನು ಸೋಲಿಸಿದರು. 15 ವರ್ಷದೊಳಗಿನ ಬಾಲಕರ ವಿಭಾಗದ ಪ್ರಮುಖ ಪಂದ್ಯ ಗಳಲ್ಲಿ ಮೈಸೂರಿನ ಶ್ಯಾಮ್‌ ಬಿಂಡಿಗ ನವಿಲೆ  15-1, 15-4 ರಿಂದ ತೇಜ್‌ ಯಶ್ವಂತ್‌ ಎಸ್‌.ಎಂ ಎದುರು, ದಕ್ಷಿಣ ಕನ್ನಡದ ಸಾತ್ವಿಕ್‌ ಎಸ್‌.ಪ್ರಭು 15-10, 15-11 ರಿಂದ ಮಾಧವ್‌ ಸತೀಶ್‌ ವಿರುದ್ಧ, ಬೀದರ್‌ನ ಮಹಮ್ಮದ್‌ ರಿಯಾನ್‌- ಉಲ್‌- ಹಕ್‌ 12-15, 16-14, 15-10ರಿಂದ ಹೇಮಂತ್‌ ಶಾನ್‌ಭಾಗ್‌ ಎದುರು, ಶಿವಮೊಗ್ಗದ ಆಧ್ಯಾನ್‌ ಎ.ಎಸ್‌ 15-10, 15-8 ರಿಂದ ಅಮೋಘ್‌ ಪೊಲೀಸ್‌ಪಾಟೀಲ ವಿರುದ್ಧ ಗೆದ್ದರು.  

15 ವರ್ಷದೊಳಗಿನ ಬಾಲಕಿಯರ ವಿಭಾಗದ ಪಂದ್ಯಗಳಲ್ಲಿ ಬೆಂಗಳೂರಿನ ಐಕ್ಯಾ ಶೆಟ್ಟಿ 15-4, 15-4ರಿಂದ ಎಂ.ಮಾನ್ಯಾ ಎದುರು, ದಕ್ಷಿಣ ಕನ್ನಡದ ಅನಿಯಾ ಮಸ್ಕರೆನ್ಹಾಸ್‌ 15-6, 15-4 ರಿಂದ ಜೆಸ್ಸಿ ವಿರುದ್ಧ, ಬಳ್ಳಾರಿಯ ಸಮುಧ್ಯುತಾ ಟಿ. 15-9, 15-5ರಿಂದ ಅಕ್ಷಿತಾ ಎದುರು ಜಯಗಳಿಸಿದರು.  : ದಕ್ಷಿಣ ಕನ್ನಡ ಜಿಲ್ಲೆಯ ನಿಕೇತನ್‌ ಅಮಿನ್‌ ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ 8ನೇ ಶ್ರೇಯಾಂಕದ ಕುಶಾಲ್‌ ಆತ್ರೇಯ ಎದುರು ಗೆದ್ದರು.

ಮಂಗಳವಾರ ನಡೆದ 17 ವರ್ಷದೊಳಗಿನ ಬಾಲಕರ ವಿಭಾಗದ ಪಂದ್ಯದಲ್ಲಿ ನಿಕೇತನ್‌ 13-15, 15-11, 15-12 ರಿಂದ ಜಯಿಸಿದರು.ಬೆಂಗಳೂರಿನ ಎಸ್‌.ಹಿತೇಶ್‌ 6-15, 15-10, 17-15 ರಿಂದ ನಮನ್‌ ಅಣ್ವೇಕರ್‌ ಅವರನ್ನು ಸೋಲಿಸಿದರು.

ಇತರ ಪ್ರಮುಖ ಪಂದ್ಯಗಳಲ್ಲಿ ಬೆಂಗಳೂರಿನ ಸಾಕೇತ್‌ ಕೌಶಿಕ್‌ 15-11, 13-15, 15-12 ರಿಂದ ಶಿವೇಶ್‌ ಅರುಣಾಚಲಂ ಎದುರು, ಹಾಸನದ ಚಿನ್ಮಯ್‌ ಕೆ.ಗೌಡ 15-9, 15-4 ರಿಂದ ಅನಿರುದ್ಧ್‌ ಕಶ್ಯಪ್‌ ವಿರುದ್ಧ, ಚಾಮರಾಜನಗರದ ನೀಲೇಶ್‌ ಜಯರಾಜ್‌ 15-7, 15-11 ರಿಂದ ಉದ್ಧವ್‌ ಕೃಷ್ಣನ್‌ ಎದುರು ಗೆಲುವು ಕಂಡರು.

ಬಾಲಕಿಯರ ವಿಭಾಗದ ಪಂದ್ಯದಲ್ಲಿ ಬೆಂಗಳೂರಿನ ಲಕ್ಷ್ಯ ರಾಜೇಶ್‌ 15-8, 15-13 ರಿಂದ ಎಸ್‌.ಸ್ಮೃತಿ ಅವರನ್ನು ಸೋಲಿಸಿದರು. 15 ವರ್ಷದೊಳಗಿನ ಬಾಲಕರ ವಿಭಾಗದ ಪ್ರಮುಖ ಪಂದ್ಯ ಗಳಲ್ಲಿ ಮೈಸೂರಿನ ಶ್ಯಾಮ್‌ ಬಿಂಡಿಗ ನವಿಲೆ  15-1, 15-4 ರಿಂದ ತೇಜ್‌ ಯಶ್ವಂತ್‌ ಎಸ್‌.ಎಂ ಎದುರು, ದಕ್ಷಿಣ ಕನ್ನಡದ ಸಾತ್ವಿಕ್‌ ಎಸ್‌.ಪ್ರಭು 15-10, 15-11 ರಿಂದ ಮಾಧವ್‌ ಸತೀಶ್‌ ವಿರುದ್ಧ, ಬೀದರ್‌ನ ಮಹಮ್ಮದ್‌ ರಿಯಾನ್‌- ಉಲ್‌- ಹಕ್‌ 12-15, 16-14, 15-10ರಿಂದ ಹೇಮಂತ್‌ ಶಾನ್‌ಭಾಗ್‌ ಎದುರು, ಶಿವಮೊಗ್ಗದ ಆಧ್ಯಾನ್‌ ಎ.ಎಸ್‌ 15-10, 15-8 ರಿಂದ ಅಮೋಘ್‌ ಪೊಲೀಸ್‌ಪಾಟೀಲ ವಿರುದ್ಧ ಗೆದ್ದರು.  

15 ವರ್ಷದೊಳಗಿನ ಬಾಲಕಿಯರ ವಿಭಾಗದ ಪಂದ್ಯಗಳಲ್ಲಿ ಬೆಂಗಳೂರಿನ ಐಕ್ಯಾ ಶೆಟ್ಟಿ 15-4, 15-4ರಿಂದ ಎಂ.ಮಾನ್ಯಾ ಎದುರು, ದಕ್ಷಿಣ ಕನ್ನಡದ ಅನಿಯಾ ಮಸ್ಕರೆನ್ಹಾಸ್‌ 15-6, 15-4 ರಿಂದ ಜೆಸ್ಸಿ ವಿರುದ್ಧ, ಬಳ್ಳಾರಿಯ ಸಮುಧ್ಯುತಾ ಟಿ. 15-9, 15-5ರಿಂದ ಅಕ್ಷಿತಾ ಎದುರು ಜಯಗಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT