ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯ್ತಿಗೆ ಬೀಗ

Last Updated 29 ಮಾರ್ಚ್ 2018, 5:11 IST
ಅಕ್ಷರ ಗಾತ್ರ

ತಾಂಬಾ: ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿ ಐವತ್ತಕ್ಕೂ ಹೆಚ್ಚು ಮಹಿಳೆಯರು ಬುಧವಾರ ಗ್ರಾಮದ ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟಿಸಿದರು.

ನಮಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗದ ಸಮಸ್ಯೆ ಸೇರಿದಂತೆ ಇನ್ನಿತರೆ ಸಮಸ್ಯೆ ಬಾಧಿಸುತ್ತಿದೆ. ಆದ್ದರಿಂದ ಸೂಕ್ತ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಈ ಸಂದರ್ಭ ಆಗ್ರಹಿಸಿದರು.

ಗ್ರಾಮ ಪಂಚಾಯ್ತಿ ಪಿಡಿಓ ಬಾಬು ಉಮದಿ ಮಾತನಾಡಿ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಅವಕಾಶವಿಲ್ಲ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು.

ಶೋಭಾ ದಿವಟಗಿ, ರಾಜಶ್ರೀ ದಿವಟಗಿ, ಇಂದ್ರಾಬಾಯಿ ನಾವಿ, ಕಮಲವ್ವ ಗೋಗಿ, ಕಾಶಿಬಾಯಿ ಜಂಬಗಿ, ಶರಣವ್ವ ಪೂಜಾರ, ಕಸ್ತೂರಿ ಹಿರೇಕುರುಬರ, ಸಿದ್ದವ್ವ ಚಟ್ಟರಕಿ, ಆಶಾ ಪೂಜಾರ, ಶಶಿಕಲಾ ಹಿರೇಕುರುಬರ, ಶಿವಮ್ಮ ಸಿಂದಗಿ, ಜಯಶ್ರೀ ಹೊನ್ನಳ್ಳಿ, ಗಂಗವ್ವ ದೇವಗಾಳಿ, ಲಕ್ಷ್ಮೀಬಾಯಿ ಅವರಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT