ಬೆಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ರ್ಯಾಪಿಡೊ ಬೈಕ್ ಟ್ಯಾಕ್ಸಿ ಸವಾರನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ವಿವೇಕ್ ಬಂಧಿತ ಆರೋಪಿ. ಮಾನ್ಯತಾ ಟೆಕ್ ಪಾರ್ಕ್ನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ತೆರಳುವುದಕ್ಕೆ ತಮ್ಮ ಮನೆಯ ಬಳಿಯಿಂದ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಪ್ರಯಾಣದ ವೇಳೆ, ವಿವೇಕ್ ಹಿಂಬದಿಗೆ ಸರಿದು ಯುವತಿಯ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಮೂಲಗಳು ಹೇಳಿವೆ.

‘ಯುವತಿ ಆಕ್ಷೇಪಿಸಿದಾಗ, ಆಕೆಯ ದೇಹವನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದ. ಘಟನೆ ನಂತರ ಯುವತಿ ಕಿರುಚಾಡಿದ್ದರು. ಸ್ಥಳೀಯರು ನೆರವಿಗೆ ಬಂದಿದ್ದರು. ತಕ್ಷಣವೇ ಯುವತಿಯನ್ನು ಬೈಕ್ನಿಂದ ಇಳಿಸಿ ಸವಾರ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

ಯುವತಿ ನೀಡಿ ದೂರು ಆಧರಿಸಿ ತನಿಖೆ ನಡೆಸಲಾಯಿತು. ಬೈಕ್ ಸಂಚರಿಸಿದ್ದ ಮಾರ್ಗಗಳಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.