ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಬುಲೆನ್ಸ್‌ಗಾಗಿ ಕಾದು ಸಾಕಾಗಿ ಆಸ್ಪತ್ರೆಗೆ ಹೋದವರು ಚಿಕಿತ್ಸೆಗಾಗಿ ಅಂಗಲಾಚಿದರು

Last Updated 11 ಜುಲೈ 2020, 5:35 IST
ಅಕ್ಷರ ಗಾತ್ರ

ಬೆಂಗಳೂರು: ಆಂಬುಲೆನ್ಸ್‌ಗಾಗಿ ಕಾದು ಸಾಕಾಗಿ ಆಸ್ಪತ್ರೆಗೆ ಹೋದ ಸೋಂಕಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಸಿಗದೆಪರದಾಡಿದರು.

ಅವೆನ್ಯೂ ರಸ್ತೆಯ ನಿವಾಸಿಯೊಬ್ಬರಿಗೆ ಸೋಂಕು ದೃಢಪಟ್ಟಿರುವುದನ್ನು ಗುರುವಾರ ರಾತ್ರಿ ಕರೆ ಮಾಡಿ ತಿಳಿಸಿದ ಬಿಬಿಎಂಪಿ ಸಿಬ್ಬಂದಿ,ಬೆಳಿಗ್ಗೆಯಾದರೂ ಕರೆದೊಯ್ಯಲು ಬರಲಿಲ್ಲ. ತಮ್ಮ ವಾಹನದಲ್ಲಿಯೇ ಶುಕ್ರವಾರ ಕೆ.ಸಿ.ಜನರಲ್ ಆಸ್ಪತ್ರೆಗೆ ಹೋದರು.ದಾಖಲಿಸಿಕೊಳ್ಳಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದರು. ಕೆಲವು ಸಮಯ ಅವರು ಆಸ್ಪತ್ರೆಯ ಬಳಿ ಕುಳಿತು ಸಿಬ್ಬಂದಿ ಬಳಿ ಅಂಗಲಾಚಿಸಿದರು. ಬಳಿಕ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು.

ವಿದ್ಯಾರ್ಥಿಗಳಿಗೆ ಇಲ್ಲ ಕಿಟ್‌: ಸೋಂಕಿತರ ಚಿಕಿತ್ಸೆಗೆ ಶ್ರಮಿಸುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಿಪಿಇ ಕಿಟ್ ನೀಡಲು ಆಸ್ಪತ್ರೆಗಳು ನಿರಾಕರಿಸುತ್ತಿವೆ.

‘ವಿದ್ಯಾರ್ಥಿಗಳೇ ಸ್ವಂತ ದುಡ್ಡಿನಲ್ಲಿ ಕಿಟ್ ಖರೀದಿಸಬೇಕು ಎಂದು ಆಸ್ಪತ್ರೆ ಆಡಳಿತ ಮಂಡಳಿಗಳು ತಿಳಿಸುತ್ತಿವೆ’ ಎಂದು ವಿದ್ಯಾರ್ಥಿನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT