ಭಾನುವಾರ, ಏಪ್ರಿಲ್ 11, 2021
32 °C

‘ರೇವಾ ನೆಸ್ಟ್‌’ ಯೋಜನೆಗೆ ಚಾಲನೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ರೇವಾ ವಿಶ್ವವಿದ್ಯಾಲಯದಲ್ಲಿ ನವೋದ್ಯಮಗಳನ್ನು ಆರಂಭಿಸಲು ವೇದಿಕೆ ಕಲ್ಪಿಸುವ ಹಾಗೂ ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ‘ರೇವಾ ನೆಸ್ಟ್’ ಯೋಜನೆಗೆ ಚಾಲನೆ ನೀಡಲಾಯಿತು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು, ಕಂಪನಿಗಳ ಪ್ರತಿನಿಧಿಗಳೊಂದಿಗೆ ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿತು.

ಕುಲಾಧಿಪತಿ ಡಾ.ಪಿ.ಶ್ಯಾಮರಾಜು, ‘ಎರಡೂವರೆ ವರ್ಷಗಳ ಹಿಂದೆಯೇ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಇಂದು 10 ನವೋದ್ಯಮಗಳ ಜೊತೆಗೆ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳ ಮೂಲಕ ‘ರೇವಾ ನೆಸ್ಟ್’ನ ನವೋದ್ಯಮಗಳು ₹1ಕೋಟಿಯಷ್ಟು ನಿಧಿ ಪಡೆದುಕೊಂಡಿದ್ದು, ಕಂಪನಿಗಳಿಗೆ ಅಗತ್ಯ ವ್ಯವಸ್ಥೆ, ಜಾಗ ಹಾಗೂ ಪ್ರೋತ್ಸಾಹ ನೀಡಲಾಗುವುದು’ ಎಂದು ತಿಳಿಸಿದರು.

‘ನೂತನವಾಗಿ ಉದ್ಯಮ ಆರಂಭಿಸುವವರಿಗೆ ಕಡಿಮೆ ಬಂಡವಾಳದಲ್ಲಿ ತಾವು ಸಿದ್ಧಪಡಿಸಬೇಕೆಂದುಕೊಂಡಿರುವ ಯೋಜನೆಯನ್ನು ಅನುಷ್ಠಾನಗೊಳಿಸಲು ಇದರಿಂದ ಅನುಕೂಲವಾಗಲಿದೆ’ ಎಂದರು. 

‘ವಿಶ್ವವಿದ್ಯಾಲಯದಲ್ಲಿ ತಾಂತ್ರಿಕ ವಿಷಯಗಳ ಅದ್ಯಯನದಲ್ಲಿ ತೊಡಗಿರುವ 7 ಸಾವಿರ ವಿದ್ಯಾರ್ಥಿಗಳೂ ಸೇರಿದಂತೆ ನಿರ್ವಹಣೆ, ವಿಜ್ಞಾನ, ಕಾನೂನು, ವಾಸ್ತುಶಿಲ್ಪ ಮತ್ತಿತರ ವಿಷಯಗಳನ್ನು ಕಲಿಯುತ್ತಿರುವ ಸುಮಾರು 15 ಸಾವಿರ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರಿಗೂ ಅನುಕೂಲವಾಗುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಧನಂಜಯ, ಕುಲಸಚಿವ ಡಾ.ಎನ್.ರಮೇಶ್, ‘ರೇವಾ ನೆಸ್ಟ್’ ಯೋಜನೆಯ ನಿರ್ದೇಶಕಿ ಡಾ.ಕಿರಣ್ ಕುಮಾರಿ ಪಾಟೀಲ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು