ಭಾನುವಾರ, ಏಪ್ರಿಲ್ 11, 2021
32 °C

ಬೆಂಗಳೂರಿನಲ್ಲಿ ಪ್ರತ್ಯೇಕ ಅಪಘಾತ; ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಎರಡು ಕಡೆ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಜಗದೀಶ್ ಆಚಾರಿ (30) ಹಾಗೂ ವೆಂಕಟರಮಣಪ್ಪ (58) ಮೃತರು. ಎರಡೂ ಅಪಘಾತಗಳ ಬಗ್ಗೆ ಹಲಸೂರು ಸಂಚಾರ ಠಾಣೆ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

’ಸವಾರ ಜಗದೀಶ್ ಆಚಾರಿ, ಗುರುವಾರ ನಸುಕಿನಲ್ಲಿ ಕೋರಮಂಗಲದ ಕಡೆಯಿಂದ ಇಂದಿರಾನಗರದ ಕಡೆಗೆ ಬರುತ್ತಿದ್ದರು. ಮಾರ್ಗಮಧ್ಯೆ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಬೈಕ್‌ ಗುದ್ದಿಸಿದ್ದರು. ರಸ್ತೆಯಲ್ಲಿ ಬೈಕ್ ಉರುಳಿಬಿದ್ದಿತ್ತು. ತೀವ್ರ ಗಾಯಗೊಂಡಿದ್ದ ಜಗದೀಶ್, ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

ಲಾರಿ ಗುದ್ದಿ ಪಾದಚಾರಿ ಸಾವು: ಇನ್ನೊಂದು ಪ್ರಕರಣದಲ್ಲಿ ಲಾರಿ ಗುದ್ದಿ ವೆಂಕಟರಮಣಪ್ಪ ಮೃತಪಟ್ಟಿದ್ದಾರೆ.

‘ಬುಧವಾರ ಸಂಜೆ ನಾಡಗೌಡ ಗೊಲ್ಲಹಳ್ಳಿ ಕಡೆಯಿಂದ ಕಣ್ಣೂರು ಕಡೆಗಿನ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಅದೇ ಸಂದರ್ಭದಲ್ಲಿ ಅತೀ ವೇಗವಾಗಿ ಬಂದ ಲಾರಿಯೊಂದು ಅವರಿಗೆ ಗುದ್ದಿತ್ತು.’

‘ತೀವ್ರ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಅವರು ತೀರಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು