ಮನೆ ಮುಂದೆ ಸಂಚಾರ ಬಂದ್‌

7

ಮನೆ ಮುಂದೆ ಸಂಚಾರ ಬಂದ್‌

Published:
Updated:
ವಿಧಾನ ಪರಿಷತ್ ಸದಸ್ಯ ಸಂದೇಶ್‌ ನಾಗರಾಜು ಅವರ ನಿವಾಸ ಇರುವ ಮೈಸೂರಿನ ಇಟ್ಟಿಗೆಗೂಡು ರಸ್ತೆಯಲ್ಲಿ ಕಂಬಗಳನ್ನು ನೆಟ್ಟು ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿರುವುದು

ಮೈಸೂರು: ವಿಧಾನ ಪರಿಷತ್ ಸದಸ್ಯ ಸಂದೇಶ್‌ ನಾಗರಾಜು ಅವರ ನಿವಾಸ ಇರುವ ಇಟ್ಟಿಗೆಗೂಡಿನ ರಸ್ತೆಯಲ್ಲಿ ಏಳು ಕಂಬಗಳನ್ನು ನೆಟ್ಟು ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಫೇಸ್‌ಬುಕ್‌ನಲ್ಲಿ ಶ್ರೀನಿಧಿ ಪ್ರಭಾಕರ್ ಎಂಬುವರು ಚಿತ್ರಸಮೇತ ಬರೆದಿದ್ದು, ಇದು ವೈರಲ್ ಆಗಿದೆ. ‘ಜನರ ಅನುಕೂಲಕ್ಕಾಗಿ ಇರುವ ರಸ್ತೆ ಮೇಲೆ ಈ ರೀತಿ ಅವೈಜ್ಞಾನಿಕ ನಿರ್ಬಂಧ ಹೇರಿರುವುದು ಅಧಿಕಾರಿಗಳ ಬುದ್ದಿಹೀನತೆಗೆ ಹಿಡಿದ ಕನ್ನಡಿ. ಕೂಡಲೇ ಕ್ರಮ ಕೈಗೊಂಡು, ಸಂಚಾರಕ್ಕೆ ಮುಕ್ತ ಮಾಡಬೇಕಾಗಿದೆ’ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಸಿದ್ಧಾರ್ಥನಗರ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಮುನಿಯಪ್ಪ, ‘ರಸ್ತೆಯನ್ನು ಬಂದ್ ಮಾಡುವುದಕ್ಕೆ ಅವಕಾಶ ಇಲ್ಲ. ಭಾರಿ ವಾಹನಗಳು ಸಂಚರಿಸದಂತೆ ತಡೆಯಲು ಮೊದಲಿಗೆ ಎರಡು ಕಂಬಗಳನ್ನು ಎರಡು ಬದಿಗಳಲ್ಲಿ ನೆಡಲಾಗಿತ್ತು. ಆದರೆ, ಈಗ ದ್ವಿಚಕ್ರ ವಾಹನಗಳು ಸಂಚರಿಸದಂತೆ ನಿರ್ಬಂಧ ಹೇರಿರುವುದು ಸರಿಯಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !