ಮಂಗಳವಾರ, ಆಗಸ್ಟ್ 4, 2020
26 °C

ಡೆಲಿವರಿ ಬಾಯ್‌ಗಳ ಸುಲಿಗೆ; ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಹಾರ ಪೂರೈಕೆ ಮಾಡುವ ಡೆಲಿವರಿ ಬಾಯ್‌ಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

‘ಡಿ.ಜೆ. ಹಳ್ಳಿಯ ಅಬ್ದುಲ್ ವಾಹಿದ್ (23)  ಹಾಗೂ ಶಬೀರ್ (25) ಬಂಧಿತರು. ಅವರಿಂದ ಮೂರು ಮೊಬೈಲ್, ಎರಡು ಕಾರು ಹಾಗೂ ಗಾಂಜಾ ಪೊಟ್ಟಣ ಜಪ್ತಿ ಮಾಡಲಾಗಿದೆ’ ಎಂದು ‍ಪೊಲೀಸರು ಹೇಳಿದರು.

‘ಹಲಸೂರು ಗೇಟ್, ಮಹದೇವಪುರ, ಯಶವಂತಪುರ, ಹೆಣ್ಣೂರು ಸೇರಿದಂತೆ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ಡೆಲಿವರಿ ಬಾಯ್‍ಗಳು ಹಾಗೂ ಬೈಕ್ ಸವಾರರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ, ಮೊಬೈಲ್, ಬೈಕ್ ಸುಲಿಗೆ ಮಾಡುತ್ತಿದ್ದರು.’

‘ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳು, ಇತ್ತೀಚೆಗೆ ಬೆಟ್ಟದಾಸನಪುರದ ಬಿಂಗಿಪುರ ರಸ್ತೆಯಲ್ಲಿ ಬೈಕ್‍ನಲ್ಲಿ ಹೊರಟಿದ್ದರು. ಬೈಕ್‌ಗೆ ನೋಂದಣಿ ಫಲಕ ಇಲ್ಲದಿದ್ದರಿಂದ ಅನುಮಾನಗೊಂಡಿದ್ದ ಗಸ್ತು ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದರು’ ಎಂದೂ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.