ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ ಸಿಎ ಬ್ಯಾಂಕ್ ವಜ್ರಮಹೋತ್ಸದ ಸಂಭ್ರಮ ನಾಳೆ

Last Updated 26 ಮೇ 2018, 12:09 IST
ಅಕ್ಷರ ಗಾತ್ರ

ಕೋಟ(ಬ್ರಹ್ಮಾವರ): ಕೋಟ ಸಹಕಾರಿ ವ್ಯವಸಾಯಕ ಸಂಘ 60 ವರ್ಷಗಳನ್ನು ಪೂರೈಸಿ ಇದೀಗ ವಜ್ರಮಹೋತ್ಸವದ ಸಂಭ್ರಮದಲ್ಲಿದೆ.

ವಜ್ರಮಹೋತ್ಸವದ ಪ್ರಯುಕ್ತ ಇದೇ 27 ರಂದು ಬೆಳಿಗ್ಗೆ 10.30ಕ್ಕೆ ಬೇಳೂರು ಶಾಖೆಯ ನೂತನ ಕಟ್ಟಡ ಸಹಕಾರಿ ಸೌರಭದ ಉದ್ಘಾಟನೆ, ಗುಂಡ್ಮಿ ಶಾಖಾ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯಲಿವೆ.

೬೦ವರ್ಷಗಳ ಹಿಂದೆ ಊರ ಅನೇಕ ಗಣ್ಯರು ಸೇರಿ ಕೋಟ ಸಹಕಾರಿ ವ್ಯವಸಾಯ ಸಂಘವನ್ನು ಸಣ್ಣ ಮಟ್ಟದಲ್ಲಿ ಹುಟ್ಟು ಹಾಕಿದರು. ಅಂದು ಹುಟ್ಟಿಕೊಂಡ ಬಾಲ್ಯಾವಸ್ಥೆಯ ಸಂಘವು ಆ ಬಳಿಕ ಬ್ಯಾಂಕ್ ಆಗಿ ಮಾರ್ಪಟಿತ್ತು. ಇದರೊಂದಿಗೆ ವಿಶಾಲವಾಗಿ ಹೆಮ್ಮರದಂತೆ ಬೆಳೆದು ಸುಸಜ್ಜಿತವಾದ ಕೇಂದ್ರ ಸ್ವಂತ ಕಛೇರಿಯನ್ನು ಹೊಂದುವುದರೊಂದಿಗೆ ತನ್ನ ಕಾರ್ಯ ವ್ಯಾಪ್ತಿಯಲ್ಲಿ 13ಶಾಖೆಗಳನ್ನು ತೆರೆಯುತ್ತಾ ತನ್ಮೂಲಕ ಪರಿಸರದ ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬ್ಯಾಂಕ್ ಸದೃಢವಾಗಿ ಬೆಳೆಯುತ್ತಿದೆ.

ಬ್ಯಾಂಕ್‌ನ ಕಾರ್ಯ ವ್ಯಾಪ್ತಿಗೆ ಬರುವ ರೈತಾಪಿ ವರ್ಗ ಹಾಗೂ ಸ್ತ್ರೀ ಶಕ್ತಿಯಂತಹ ಸಂಘಗಳಿಗೆ ಬ್ಯಾಂಕ್‌ನ ವಿವಿಧ ಯೋಜನೆಯ ಲಾಭ ಸಿಗುತ್ತಿದ್ದು ಒಂದಿಷ್ಟು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.

ವಜ್ರಮಹೋತ್ಸವಕ್ಕೆ ಚಾಲನೆ: ಇದೇ 27ರಂದು ಬೇಳೂರು ಶಾಖೆಯ ಸ್ವಂತ ಕಟ್ಟಡ ಸಹಕಾರ ಸೌರಭ ಲೋಕಾರ್ಪಣೆ, ಗುಂಡ್ಮಿ ಶಾಖಾ ಕಛೇರಿ ಕಟ್ಟಡ ಶಿಲಾನ್ಯಾಸ, ಪ್ರಧಾನ ಕಛೇರಿ ಸಭಾಂಗಣ ನೀಲ ನಕಾಶೆ ಅನಾವರಣ ಮತ್ತು ಸಹಕಾರ ಸಮ್ಮಿಲನ ಸಮಾವೇಶ ಕಾರ್ಯಕ್ರಮಗಳು ನಡೆಯಲಿದೆ.

ಬ್ಯಾಂಕ್‌ನ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಬೇಳೂರು ಶಾಖೆಯನ್ನು ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಈಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಕಿಶನ್ ಹೆಗ್ಡೆ ನೂತನ ಗೋದಾಮು, ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಭದ್ರತಾ ಕೋಶ, ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ ಭದ್ರತಾ ಕೊಠಡಿ, ಬೆಂಗಳೂರು ಹೋಟೆಲ್ ಮಾಲಕರ ಸಂಘದ ನಿರ್ದೇಶಕ ಶಶಿಧರ ಮಯ್ಯ ವಾಣಿಜ್ಯ ಸಂಕೀರ್ಣ, ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಸ್.ದಿನಕರ ಶೆಟ್ಟಿ ಗಣಕಯಂತ್ರಕ್ಕೆ ಚಾಲನೆ ನೀಡುವರು. ಗುಂಡ್ಮಿ ಶಾಖೆಯ ಶಿಲಾನ್ಯಾಸವನ್ನು ಸಾಲಿಗ್ರಾಮ ಗುರುನರಸಿಂಹ ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ನೆರೆವೇರಿಸುವರು ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT