ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗೆ ಚಿಕಿತ್ಸೆ ನೀಡಲು ಒಪ್ಪದ ವೈದ್ಯನಿಗೆ ಬೆದರಿಕೆ: ರೌಡಿಶೀಟರ್‌ ಬಂಧನ

Last Updated 12 ಫೆಬ್ರುವರಿ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ಗಾಯಗೊಂಡ ನಾಯಿಗೆ ಚಿಕಿತ್ಸೆ ನೀಡುವಂತೆ ವೈದ್ಯರೊಬ್ಬರನ್ನು ಬೆದರಿಸಿ, ಹಲ್ಲೆ ನಡೆಸಿದ ಆರೋಪದಲ್ಲಿ ರೌಡಿಶೀಟರ್‍ ಪ್ರದೀಪ್‍ ಎಂಬಾತನನ್ನು ಅಶೋಕನಗರ ಪೊಲೀಸರು ಬಂ‌ಧಿಸಿದ್ದಾರೆ.

ರೌಡಿಶೀಟರ್‍ ವಿರುದ್ಧ ಆಸ್ಟಿನ್‌ಟೌನ್ ಲೇಔಟ್‍ನ ನಿವಾಸಿ ವೈದ್ಯ ಎ.ಎಚ್. ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದರು.

ಫೆ. 8ರಂದು ರಾತ್ರಿ 10.20ರ ಸುಮಾರಿಗೆ ನೀಲಸಂದ್ರದಲ್ಲಿರುವ ಕ್ಲಿನಿಕ್‌ನಲ್ಲಿ ಎ.ಎಚ್. ಶೆಟ್ಟಿ ಅವರ ಇದ್ದಾಗ ಗಾಯಗೊಂಡ ನಾಯಿಯೊಂದನ್ನು ಅಲ್ಲಿಗೆ ತಂದ ಪ್ರದೀಪ್‌, ಚಿಕಿತ್ಸೆ ನೀಡುವಂತೆ ತಿಳಿಸಿದ್ದ.

‘ನಾನು ಪ್ರಾಣಿಗಳಿಗೆ ಚಿಕಿತ್ಸೆ ಕೊಡುವ ವೈದ್ಯನಲ್ಲ. ದಯವಿಟ್ಟು ನೀವು ಪಶು ವೈದ್ಯಕೀಯ ಆಸ್ಪತ್ರೆಗೆ ಹೋಗಿ’ ಎಂದು ಶೆಟ್ಟಿ ಹೇಳಿದ್ದರು. ಆಗ ಸಿಟ್ಟುಗೊಂಡ ಪ್ರದೀಪ್, ಅವಾಚ್ಯವಾಗಿ ನಿಂದಿಸಿದ್ದ. ಅಲ್ಲಿದ್ದ ಟೇಬಲ್ ಮತ್ತು ನೀರಿನ ಫಿಲ್ಟರ್‍ಗಳನ್ನು ಕೆಳಗೆ ಬೀಳಿಸಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದ.

ಅಲ್ಲೇ ಇದ್ದ ವೈದ್ಯರ ಸಹೋದರ ನೆರವಿಗೆ ಬಂದಾಗ ಚೂರಿಯಿಂದ ಪ್ರದೀಪ್ ಹಲ್ಲೆಗೆ ಯತ್ನಿಸಿದ್ದ. ಅದನ್ನು ಕಂಡ ಶೆಟ್ಟಿ, ಸಹೋದರರ ಜೊತೆ ಅಲ್ಲಿಂದ ತಪ್ಪಿಸಿಕೊಂಡಿದ್ದರು. ನಾಯಿಗೆ ಚಿಕಿತ್ಸೆ ನೀಡದಿದ್ದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರಿಗೆ ಕರೆ ಮಾಡಲು ಮುಂದಾದಾಗ ಪ್ರದೀಪ್ ಪರಾರಿಯಾಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಕುಡಿದ ಮತ್ತಿನಲ್ಲಿ ಪ್ರದೀಪ್ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT