ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಿತ್ರ ನಿರ್ಮಾಣ ಸುಲಭವಲ್ಲ: ನಿರ್ದೇಶಕ ಸಾಯಿಪ್ರಕಾಶ್‌

Last Updated 29 ಜುಲೈ 2019, 3:49 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ‘ಕನ್ನಡ ಚಿತ್ರರಂಗ ಇಂದು ತಾಂತ್ರಿಕವಾಗಿ ಮುಂದಿದ್ದರೂ, ವಿಭಿನ್ನ ಅಭಿರುಚಿಯ ಸಿನಿಮಾಗಳು ನಿರ್ಮಾಣವಾಗುತ್ತಿದ್ದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಸದ್ಯ, ಕನ್ನಡ ಸಿನಿಮಾ ನಿರ್ಮಿಸುವುದು ಸುಲಭವಲ್ಲ’ ಎಂದು ಚಿತ್ರ ನಿರ್ದೇಶಕ ಸಾಯಿಪ್ರಕಾಶ್‌ ಅಭಿಪ್ರಾಯಪಟ್ಟರು.

ಸಂತ ಶ್ರೀಕೃಷ್ಣದಾಸ ಪ್ರತಿಷ್ಠಾನ ಹಾಲಿಗೇರಿ-ಬೆಂಗಳೂರು, ಮನಸಿರಿ ಶರಣಾಶ್ರಮ ಸಂಸ್ಥಾನ ಟ್ರಸ್ಟ್ (ರಿ) ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಸಿನಿಕಲಾ ಚಕ್ರವರ್ತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಕನ್ನಡ ಚಿತ್ರರಂಗ ಬೆಳೆಯಬೇಕೆಂದರೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸಬೇಕು’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ತುಳಸೀಪ್ರಿಯ, ಸಿನಿಮಾ, ರಂಗಭೂಮಿಯ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ, ಗೌರವ ಸಲ್ಲಿಸಲಾಗುತ್ತಿದೆ ಎಂದರು.

ಆನಂದ್‍ಕುಮಾರ್‌, ಡಾ.ಎಂ.ಅನಂತಕುಮಾರ್‌, ವೈದ್ಯ ಡಾ.ಲಕ್ಷ್ಮಣ್‍ ಸುಗ್ಗಯ್ಯ, ಡಾ. ಉಷಾರಾಣಿ, ಸರೋಜಿನಿ ಎಂ.ಅರಗೆರಾಯಭಾಗ್, ಡಿ. ಹನುಮಕ್ಕ, ಬಸವರಾಜಪಿ.ವಾರಿ, ಎಚ್.ಕೆ.ಪಾಪಣ್ಣ, ಸುರೇಶ್ ರಾಥೋಡ್, ಎನ್.ವಜ್ರಪ್ಪ, ಮೋಹನ್ ರಾಜಣ್ಣ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT