ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ₹ 2 ಲಕ್ಷ‌ ಕೋಟಿ ಹೂಡಿಕೆ: ಬಸವರಾಜ ಬೊಮ್ಮಾಯಿ

Last Updated 26 ನವೆಂಬರ್ 2022, 19:27 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ₹ 2 ಲಕ್ಷ‌ ಕೋಟಿ ಬಂಡವಾಳ ಹೂಡಿಕೆ ಆಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಏಟ್ರಿಯಾ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ‘ಬಿಯಾಂಡರ್ ಎಮರ್ಜೆನ್ಸಿ ಆ್ಯಂಡ್ ಗ್ರೀನ್ ಫ್ಯೂಚರ್ ಸಮ್ಮಿಟ್’ನಲ್ಲಿ ಉದ್ಯಮಿಗಳ ಜೊತೆ ಅವರು ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಏಟ್ರಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ ಅನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.

‘ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿ ನವೀ ಕರಣ ಇಂಧನ ಹೆಚ್ಚಿನ ಪ್ರಮಾಣದಲ್ಲಿ ‌ಬಳಕೆಯಾಗಲಿದೆ. ಹೈಡ್ರೋಜನ್ ಉದ್ಯಮದಲ್ಲಿ ‌ಹೆಚ್ಚಿನ ಬಂಡವಾಳ ಹೂಡಿಕೆಯಾಗಲಿದ್ದು, ಕಡಿಮೆ ದರ ದಲ್ಲಿ ಇಂಧನ ದೊರೆಯುವಂತೆ ಮಾಡಲು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ’. ‘ಎಲೆಕ್ಟ್ರಿಕ್ ವಾಹನ ಗಳ ಸಂಖ್ಯೆ ಹೆಚ್ಚಿದಂತೆ ಬೆಲೆ ಕಡಿಮೆ ಯಾಗಲಿದೆ’ ಎಂದರು.

‘ಎನ್‌ಇಪಿಯನ್ನು ಜಾರಿಗೊಳಿಸಲು ಖಾಸಗಿಯವರ ಪಾತ್ರ ವೂ ದೊಡ್ಡದಿದೆ. ಶಿಕ್ಷಣ ಸಂಸ್ಥೆಗಳು ಸರ್ಕಾರದೊಂದಿಗೆ ಸಹಯೋಗ‌ ಮಾಡಿ ಕೊಂಡು ಕಾರ್ಯನಿರ್ವಹಿಸಬಹುದು’ ಎಂದರು.

‘ಭಾರತದಲ್ಲಿ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಇಲ್ಲಿ ಉದ್ಯೋಗ ಸೃಷ್ಟಿಸುವುದು ದೊಡ್ಡ ಜವಾಬ್ದಾರಿ‌. ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನ ಹೊಂದಾಣಿಕೆ ಮಾಡಿ ಕೊಂಡು ಶಿಕ್ಷಣ ನೀಡುವ ವ್ಯವಸ್ಥೆಯಾಗಬೇಕು’ ಎಂದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಏಟ್ರಿಯಾ ಗುಂಪಿನ ಅಧ್ಯಕ್ಷ ಸಿ.ಎಸ್. ಸುಂದರ್‌ ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT