ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 15.80 ಲಕ್ಷ ತೆರಿಗೆ ವಂಚನೆ; ಬೆನ್ಜ್ ಕಾರು ಜಪ್ತಿ

Last Updated 3 ಅಕ್ಟೋಬರ್ 2020, 15:32 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷಗಳಿಂದ ತೆರಿಗೆ ಪಾವತಿಸದೇ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆನ್ಜ್ ಕಾರನ್ನು ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದು, ಮಾಲೀಕ ಗಿರೀಶ್ ಸುರೇಶ್ ಎಂಬುವರಿಗೆ ನೋಟಿಸ್ ನೀಡಿದ್ದಾರೆ.

‘2018ರ ಜುಲೈನಲ್ಲಿ ಖರೀದಿಸಿದ್ದ ಬೆನ್ಜ್ ಕಾರಿಗೆ ತಾತ್ಕಾಲಿಕ ನೋಂದಣಿ ಫಲಕವಿತ್ತು. ಆಗಸ್ಟ್ 2018ರಂದೇ ತಾತ್ಕಾಲಿಕ ನೋಂದಣಿ ಸಂಖ್ಯೆ ಅವಧಿ ಮುಗಿದಿತ್ತು. ಅಷ್ಟಾದರೂ ಮಾಲೀಕರು, ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಹಾಕಿಕೊಂಡು 37 ಸಾವಿರ ಕಿ.ಮೀ ಕಾರು ಓಡಿಸಿದ್ದು, ₹ 15.80 ಲಕ್ಷ ತೆರಿಗೆ ಕಟ್ಟಬೇಕಿದೆ’ ಎಂದು ಸಾರಿಗೆ ಅಧಿಕಾರಿಯೊಬ್ಬರು ಹೇಳಿದರು.

‘ಇತ್ತೀಚೆಗೆ ರಸ್ತೆಯಲ್ಲಿ ಹೊರಟಿದ್ದ ಕಾರು ತಡೆದು ಚಾಲಕನನ್ನು ವಿಚಾರಣೆ ನಡೆಸಿದಾಗ ತೆರಿಗೆ ಪಾವತಿ ಮಾಡದಿರುವುದು ಬಯಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್ ಹಾಗೂ ಮೋಟಾರು ವಾಹನ ಇನ್‌ಸ್ಪೆಕ್ಟರ್ ಲಕ್ಷ್ಮಿ ನೇತೃತ್ವದ ತಂಡ ಕಾರನ್ನು ಜಪ್ತಿ ಮಾಡಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT