ಬೆಂಗಳೂರು: ಸೈಬರ್ ಭದ್ರತೆ ಮತ್ತು ಆನ್‌ಲೈನ್ ವಹಿವಾಟುಗಳನ್ನು ಸುರಕ್ಷಿತವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ರಾಮನ್ ಸಂಶೋಧನಾ ಸಂಸ್ಥೆ (ಆರ್‌ಆರ್‌ಐ) ಮಹತ್ವದ ಸಂಶೋಧನೆ ಕೈಗೊಂಡಿದೆ.
ಉಪಗ್ರಹ ಆಧಾರಿತ ’ಕ್ವಾಂಟಮ್ ಕಮ್ಯೂನಿಕೇಷನ್’ ಕುರಿತ ಸಂಶೋಧನೆ ಇದಾಗಿದ್ದು, ರಕ್ಷಣಾ ವಲಯ ಸೇರಿದಂತೆ ವಿವಿಧ ವಲಯಗಳನ್ನು ಈ ತಾಂತ್ರಿಕತೆಯನ್ನು ಬಳಸಬಹುದಾಗಿದೆ.
‘ಸುರಕ್ಷಿತ ಸಂವಹನವನ್ನು ಖಾತರಿಪಡಿಸುವ ತಾಂತ್ರಿಕತೆಯನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಮಾಹಿತಿ ಬೇಧಿಸುವುದನ್ನು ತಡೆಯಬಹುದಾಗಿದೆ. ಸದ್ಯ ಲಭ್ಯವಿರುವ ವ್ಯವಸ್ಥೆಗಿಂತಲೂ ಇದು ಹೆಚ್ಚು ಸುರಕ್ಷಿತವಾಗಿದೆ’ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
ಇಸ್ರೊದ ಯು.ಆರ್. ರಾವ್ ಉಪಗ್ರಹ ಕೇಂದ್ರದ ಸಹಭಾಗಿತ್ವದಲ್ಲಿ ಈ ಸಂಶೋಧನೆಯನ್ನು ಕೈಗೊಳ್ಳಲಾಗಿದೆ.
ಆರ್‌ಆರ್‌ಐ ಪ್ರೊಫೆಸರ್ ಡಾ. ಉರ್ಬಾಸಿ ಸಿನ್ಹಾ ಅವರ ನೇತೃತ್ವದ ಸಂಶೋಧನಾ ತಂಡ ಈ ಕಾರ್ಯವನ್ನು ಕೈಗೊಂಡಿದೆ.
‘ಸ್ಥಿರ ಮತ್ತು ಸಂಚರಿಸುವ ವಾಹಕಗಳ ನಡುವೆ ಸುರಕ್ಷಿತವಾದ ಸಂಪರ್ಕ ಕಲ್ಪಿಸುವ ಪ್ರಮುಖ ವ್ಯವಸ್ಥೆ ಇದಾಗಿದೆ. ಇದೇ ಪ್ರಥಮ ಬಾರಿಗೆ ಭಾರತದಲ್ಲಿ ಸುರಕ್ಷಿತವಾದ ಇಂತಹ ಪ್ರಯೋಗವನ್ನು ಕೈಗೊಳ್ಳಲಾಗಿದೆ. ಉದಾಹರಣೆಗೆ, ಭಾರತೀಯ ನೌಕಾಪಡೆ ಈ ತಾಂತ್ರಿಕತೆ ಬಳಸಬಹುದಾಗಿದೆ’ ಎಂದು ಸಿನ್ಹಾ ವಿವರಿಸಿದ್ದಾರೆ.
‘ಉಪಗ್ರಹ ಆಧಾರಿತ ಕ್ವಾಂಟಮ್ ಕಮ್ಯುನಿಕೇಷನ್ ಕ್ಷೇತ್ರದಲ್ಲಿ ಇದು ಮೈಲಿಗಲ್ಲು’ ಎಂದು ಆರ್‌ಆರ್‌ಐ ನಿರ್ದೇಶಕ ಪ್ರೊ. ತರುಣ ಸೌರದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.