‘ಸೈನಿಕ ಶಾಲೆ ಆರಂಭಿಸಲು ಶಂಕುಸ್ಥಾಪನೆ’

7

‘ಸೈನಿಕ ಶಾಲೆ ಆರಂಭಿಸಲು ಶಂಕುಸ್ಥಾಪನೆ’

Published:
Updated:
Deccan Herald

ಬೆಂಗಳೂರು: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ₹260 ಕೋಟಿ ಬಿಡುಗಡೆಯಾಗಿದೆ. ಸೈನಿಕ ಶಾಲೆ ನಿರ್ಮಿಸಲು ಸದ್ಯದಲ್ಲಿಯೇ ಶಂಕುಸ್ಥಾಪನೆ ಮಾಡಲಿದ್ದೇವೆ’ ಎಂದು ಸಮನ್ಯಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ರೈಲ್ವೆ ನಿಲ್ದಾಣದ ಬಳಿ ಬುಧವಾರ, ಸಂಗೊಳ್ಳಿ ರಾಯಣ್ಣನ 221ನೇ ಜಯಂತಿ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯದ ಕಹಳೆ ಊದಿದ ಮೊದಲ ಕನ್ನಡಿಗ ರಾಯಣ್ಣ, ಸ್ವಾಮಿಭಕ್ತಿ ಹಾಗೂ ದೇಶಭಕ್ತಿಗೆ ಹೆಸರಾಗಿದ್ದಾರೆ. ಆಗಸ್ಟ್‌ 15ರಂದು ಹುಟ್ಟಿರುವ ಮಹಾತ್ಮನನ್ನು ನಾವು ಇಂದು ಸ್ಮರಿಸಬೇಕಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಎಚ್‌.ಎಂ.ರೇವಣ್ಣ ‘ರೈಲ್ವೆ ನಿಲ್ದಾಣದ ಬಳಿಯ ಮೇಲ್ಸೇತುವೆಗೆ ರಾಯಣ್ಣನ ಹೆಸರು ಇಡುವ ಸಾಧ್ಯತೆ ಇದೆ. ದೇಶಕ್ಕಾಗಿ ಹೋರಾಡಿದ ವೀರನಿಗೆ ಸಿಗುವ ಗೌರವ ಇದಾಗಿದೆ’ ಎಂದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ರಾಯಣ್ಣನ ಹೋರಾಟದ ಚಿಂತನೆ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು ಆಡಳಿತ ಮಾಡಬೇಕು. ಜನಸಮಾನ್ಯರ ಸಮಸ್ಯೆಗಳನ್ನು ಕೇಳಿ ಪರಿಹರಿಸಲು ಇದರಿಂದ ಸಾಧ್ಯವಿದೆ’ ಎಂದು ಹೇಳಿದರು.

 

 

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !