ಬುಧವಾರ, ಏಪ್ರಿಲ್ 8, 2020
19 °C
ವೆಚ್ಚ ಲೆಕ್ಕಿಗರ ಸಮಾವೇಶದಲ್ಲಿ ನ್ಯಾ.ಸಂತೋಷ್ ಹೆಗ್ಡೆ ಪ್ರತಿಪಾದನೆ

ಹಗರಣಗಳ ಹಿಂದೆ ಭ್ರಷ್ಟರ ಅಧಿಕಾರದ ದರ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದಲ್ಲಿ ನಡೆದ ದೊಡ್ಡ ಹಗರಣಗಳ ಹಿಂದೆ ಭ್ರಷ್ಟರ ಅಧಿಕಾರದ ದರ್ಪ ಹಾಗೂ ದುರಾಸೆ ಅಡಗಿತ್ತು. ಈ ವೇಳೆ ದೇಶದ ಅಭಿವೃದ್ಧಿಗಿಂತ ಹಗರಣಗಳ ಪ್ರಮಾಣವನ್ನು ಬಿಂಬಿಸುವ ಅಂಕೆಯ ಸೊನ್ನೆಗಳು ಅಭಿವೃದ್ಧಿಯಾಗಿದ್ದೇ ಹೆಚ್ಚು’ ಎಂದು ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ಬೆಂಗಳೂರು ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ವೆಚ್ಚ ಲೆಕ್ಕಿಗರ ಸಮಾವೇಶದಲ್ಲಿ ‘ಸಾಮಾಜಿಕ ಮೌಲ್ಯಗಳ ಕುಸಿತ–ಅದರ ಪರಿಣಾಮಗಳು’ ಕುರಿತು ಅವರು ಮಾತನಾಡಿದರು.

‘ಸಾವಿರಾರು ಕೋಟಿ ರೂಪಾಯಿ ತೆರಿಗೆ ಹಣವನ್ನು ಹಗರಣಗಳ ಮೂಲಕ ನುಂಗಿ ಹಾಕಿದ್ದಾರೆ. ಈ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದನ್ನು ವೆಚ್ಚ ಲೆಕ್ಕಿಗರೇ ಮುಂದೊಂದು ದಿನ ಹೇಳಬೇಕಾಗುತ್ತದೆ’ ಎಂದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ,‘ ದೇಶದಲ್ಲಿ ಎದುರಾಗಿರುವ ಬಿಕ್ಕಟ್ಟುಗಳಿಂದ ಜಿಡಿಪಿ ಕುಸಿತ ಕಂಡಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಸುಧಾರಣೆಯಾಗಲಿದೆ. ಜಿಎಸ್‍ಟಿ ಜಾರಿ ಬಳಿಕ ವ್ಯಾಪಾರಿಗಳಿಗೆ ಅನುಕೂಲವಾಗಿದ್ದು, ತೆರಿಗೆ ಸಂಗ್ರಹಣೆ ಸುಧಾರಣೆಯಾಗುತ್ತಿದೆ. ನೋಟು ರದ್ದತಿ ಬಳಿಕ ದೇಶದಲ್ಲಿ ಕಪ್ಪು ಹಣ ನಿಯಂತ್ರಣಕ್ಕೆ ಬಂದು, ಭ್ರಷ್ಟಾಚಾರವೂ ಕಡಿಮೆಯಾಗಿದೆ’ ಎಂದು ವಿವರಿಸಿದರು.

‘ಚಿಕ್ಕ ದೇಶಗಳಲ್ಲೇ ನೋಟು ರದ್ದತಿ ಸವಾಲಿನ ಮಾತು. ಇನ್ನು 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದ ಆರ್ಥಿಕತೆ ನಿಭಾಯಿಸುವುದು ಸುಲಭದ ಮಾತಲ್ಲ. ಈ ಸವಾಲು ಸ್ವೀಕರಿಸಿ ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕತೆಗೆ ಹೊಸ ಆಯಾಮ ನೀಡಿ ದಿಟ್ಟತನ ತೋರಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು