ಬೆಂಗಳೂರು: ಹೊಸ ಸಂಪರ್ಕಗಳಿಗೆ ನಿಗದಿಪಡಿಸಿರುವ ಹಣವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಲು ಸಾಧ್ಯವಾಗದವರಿಗೆ ಕಂತುಗಳ ಮೂಲಕ ಪಾವತಿಸಿ ಕಾವೇರಿ ನೀರಿನ ಸಂಪರ್ಕ ಪಡೆಯಲು ಜಲಮಂಡಳಿ ಆರಂಭಿಸಿರುವ ‘ಸರಳ ಕಾವೇರಿ’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಾವೇರಿ 5ನೇ ಹಂತದ ಯೋಜನೆಯಡಿ ನಗರಕ್ಕೆ ಹೆಚ್ಚುವರಿಯಾಗಿ 775 ದಶಲಕ್ಷ ಲೀಟರ್ ನೀರನ್ನು ತರಲಾಗಿದ್ದು, 110 ಹಳ್ಳಿಗಳು ಸೇರಿದಂತೆ ಇತರೆ ಪ್ರದೇಶಗಳಿಗೆ ಪೂರೈಸಲಾಗುತ್ತಿದೆ. ಈ ಯೋಜನೆಯಡಿ 4 ಲಕ್ಷ ನೀರಿನ ಸಂಪರ್ಕ ನೀಡುವ ಗುರಿ ಇದೆ. ಈ ಗುರಿ ತಲುಪಲು ಜಲಮಂಡಳಿ ಮೇ 9 ರಂದು ‘ಸರಳ ಕಾವೇರಿ’ ಯೋಜನೆ ಜಾರಿಗೊಳಿಸಿತು.

ಈ ಯೋಜನೆ ಆರಂಭವಾಗಿ ಒಂದೂವರೆ ತಿಂಗಳಾಗುತ್ತಿದೆ. ಆರಂಭದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಗ ಯೋಜನೆಯಡಿ 144 ಮಂದಿಯಷ್ಟೇ ಅರ್ಜಿ ಸಲ್ಲಿಸಿ ಸಂಪರ್ಕ ಪಡೆದಿದ್ದರು. ಪ್ರಸ್ತುತ 1500 ಸಂಪರ್ಕಗಳಿಗೆ ಕಂತುಗಳ ಸೌಲಭ್ಯದ ಅಡಿಯಲ್ಲಿ ಹಣ ಪಾವತಿಗೆ ಮಂಜೂರಾತಿ ದೊರೆತಿದೆ. ಇನ್ನೂ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಸ್ವಾಧೀನಾನುಭವ ಪತ್ರ(ಒಸಿ) ಮತ್ತು ಇತರೆ ಕೆಲವು ದಾಖಲೆಗಳ ಸಲ್ಲಿಕೆ ಕಡ್ಡಾಯಗೊಳಿಸಿದ ನಂತರ, ಹೊಸದಾಗಿ ನೀರಿನ ಸಂಪರ್ಕ ಪಡೆಯುವವರ ಸಂಖ್ಯೆ ಕಡಿಮೆಯಾಗಿತ್ತು. ಇತ್ತೀಚೆಗೆ ‘ಒಸಿ’ ವಿನಾಯಿತಿ ಇರುವಂತಹ ಸಣ್ಣ ನಿವೇಶನಗಳಲ್ಲಿ (600 ಚದರ ಅಡಿಗಿಂತ ಕಡಿಮೆ ಇರುವ) ಮನೆ ನಿರ್ಮಿಸಿಕೊಂಡವರು ಅರ್ಜಿ ಸಲ್ಲಿಸಿ, ಯೋಜನೆಯ ಅನುಕೂಲ ಪಡೆಯುತ್ತಿದ್ದಾರೆ. ‘ಒಸಿ’ ಹೊಂದಿರುವ ಕೆಲವು ಕಟ್ಟಡಗಳು, ಅಪಾರ್ಟ್ಮೆಂಟ್ನವರೂ ಸಮಾನ ಕಂತುಗಳಲ್ಲಿ ಹಣ ಪಾವತಿಸುವ ಸೌಲಭ್ಯ ಪಡೆಯುತ್ತಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಸರಳ ಕಾವೇರಿ ಯೋಜನೆಯನ್ನು ಬಳಸಿಕೊಳ್ಳಲು ಸಾಕಷ್ಟು ಜನರು ಆಸಕ್ತಿ ತೋರುತ್ತಿದ್ದಾರೆ. ಅದಕ್ಕೆ ಸಲ್ಲಿಸಿರುವ ಅರ್ಜಿಗಳ ಸಂಖ್ಯೆಯೇ ಸಾಕ್ಷಿ. ಆದರೆ, ಒಸಿ ಸಮಸ್ಯೆ ಇರುವ ಕಾರಣ, ಈ ಪ್ರಕ್ರಿಯೆ ವೇಗ ಪಡೆದುಕೊಂಡಿಲ್ಲ. ಈ ಸಮಸ್ಯೆ ಬಗೆಹರಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ನೀರಿನ ಸಂಪರ್ಕಗಳನ್ನು ಪಡೆಯುತ್ತಾರೆ’ ಎಂದು ಜಲಮಂಡಳಿಯ ಅಧ್ಯಕ್ಷ ವಿ.ರಾಮಪ್ರಸಾತ್ ಮನೋಹರ್ ವಿಶ್ವಾಸ ವ್ಯಕ್ತಪಡಿಸಿದರು.

ಗಡುವು ವಿಸ್ತರಣೆಗೆ ಚಿಂತನೆ

ನೀರಿನ ಸಂಪರ್ಕ ಪಡೆಯಲು ನಿಗದಿಪಡಿಸಿರುವ ಒಟ್ಟು ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಲು ಸಾಧ್ಯವಾಗದವರಿಗೆ 'ಸರಳ ಕಾವೇರಿ' ಯೋಜನೆಯಡಿ ನೀರಿನ ಸಂಪರ್ಕ ಪಡೆಯಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿದೆ. ಈಗ ವಿಧಿಸಿರುವ ಗಡುವು ಜುಲೈ 9ಕ್ಕೆ ಮುಕ್ತಾಯಗೊಳ್ಳುತ್ತದೆ. ಆದರೆ ಈಗ ‘ಒಸಿ’ ಸಮಸ್ಯೆಯಿರುವ ಕಾರಣ ನೀರಿನ ಹೊಸ ಸಂಪರ್ಕಗಳು ಹೆಚ್ಚಾಗಿಲ್ಲ. ಈ ಕಾರಣದಿಂದ ‘ಸರಳ ಕಾವೇರಿ’ ಯೋಜನೆಯಡಿ ನೀರಿನ ಸಂಪರ್ಕ ಪಡೆಯುವ ಗಡುವನ್ನು ಇನ್ನೂ ಎರಡು ತಿಂಗಳು ವಿಸ್ತರಿಸಲು ಜಲಮಂಡಳಿ ಚಿಂತನೆ ನಡೆಸಿದೆ ಎಂದು ರಾಮ್ಪ್ರಸಾತ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

’ಸರಳ ಕಾವೇರಿ’: ಠೇವಣಿ ಪಾವತಿ ಹೇಗೆ ?

ಜಲಮಂಡಳಿ ನೀಡುವ ಬೇಡಿಕೆ ನೋಟಿಸ್ನ ಶೇ 20ರಷ್ಟು ಶುಲ್ಕ ಪಾವತಿಸಬೇಕು

ಉಳಿದ ಶೇ 80ರಷ್ಟು ಶುಲ್ಕವನ್ನು 12 ತಿಂಗಳು ಸಮಾನ ಕಂತುಗಳ ಮೂಲಕ ಪಾವತಿಸಬಹುದು.

ಈ ಅವಕಾಶವನ್ನು ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಿತ ಕಟ್ಟಡಗಳಿಗೆ ನೀಡಿಲ್ಲ.

ಶುಲ್ಕಎಷ್ಟು ?

ಅಪಾರ್ಟ್ಮೆಂಟ್ ಸೇರಿದಂತೆ ವಸತಿ ಕಟ್ಟಡಗಳಿಗೆ : ₹ 400 (ಪ್ರತಿ ಚ.ಅಡಿಗೆ)

ವಸತಿಯೇತರ ವಾಣಿಜ್ಯ ಕಟ್ಟಡಗಳು: ₹600 (ಪ್ರತಿ ಚ.ಅಡಿಗೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.