ಹಿಂದುತ್ವದ ಕಲ್ಲಿಗೆ ಆಕಾರ ಕೊಟ್ಟ ಸಾವರ್ಕರ್: ಜಿ.ಬಿ. ಹರೀಶ್
ಬೆಂಗಳೂರು: ‘ಹಿಂದುತ್ವದ ಕಲ್ಲಿಗೆ ಶಿಲ್ಪಿಯಾಗಿ ಆಕಾರ ಕೊಟ್ಟ ಸಾವರ್ಕರ್, ಜನಸಾಮಾನ್ಯರಿಗೆ ಹಿಂದುತ್ವದ ಮಹತ್ವ ಸಾರಿದ್ದರು’ ಎಂದು ಚಿಂತಕ ಜಿ.ಬಿ. ಹರೀಶ್ ತಿಳಿಸಿದರು.
ಮಂಥನ ಬೆಂಗಳೂರು, ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಮಗ್ರ ಸಾವರ್ಕರ್’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು. ‘ಧರ್ಮ ರಕ್ಷಣೆಗೆ ಹಿಂದೂ ಧರ್ಮದಲ್ಲಿ ಅಂತರ್ಗತವಾದ ಸ್ವಭಾವ ಜ್ಞಾನ ಮತ್ತು ಕ್ಷಾತ್ರ. ಅನ್ಯ ಧರ್ಮಗಳು ಹಿಂದೂ ಧರ್ಮದ ಅಸ್ತಿತ್ವವನ್ನೇ ಅಳಿಸಲು ಪ್ರಯತ್ನಿಸಿದ ಕಾಲಘಟ್ಟದಲ್ಲಿ ಸಾವರ್ಕರ್ ಧರ್ಮ ರಕ್ಷಿಸಲು ಶ್ರಮಿಸಿದರು. ಇದರಿಂದಾಗಿ ಸಾವರ್ಕರ್ ಇತರ ಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರ ಚಿಂತನೆಗಳನ್ನು ನಿರ್ಮೂಲನೆ ಮಾಡುವ ಎಲ್ಲ ರೀತಿಯ ಪ್ರಯತ್ನಗಳೂ ನಡೆದಿದ್ದವು’ ಎಂದರು.
ಶಾಸಕ ಪಿ. ರಾಜೀವ್, ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಂತಹವರಿಗೆ ರಾಷ್ಟ್ರ ಪ್ರೇಮಿ ಸಾವರ್ಕರ್ ಹೇಡಿಯಾಗಿ ಕಾಣುತ್ತಾರೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಸಾವರ್ಕರ್ ಅವರನ್ನು ಕೂರಿಸುವ ಜವಾ ಬ್ದಾರಿ ನಮ್ಮದಾಗಬೇಕು. ಮುಂದಿನ ದಿನಗಳಲ್ಲಿ ಬಿ.ಆರ್. ಅಂಬೇಡ್ಕರ್ ಮತ್ತು ಸಾವರ್ಕರ್ ಅವರ ಯುಗ ಬರಲಿದೆ’ ಎಂದು ಹೇಳಿದರು.
ಲೇಖಕಿ ಎಸ್.ಆರ್.ಲೀಲಾ, ‘ಹಿಂದೂಗಳ ಮೇಲೆ ಮುಸ್ಲಿಂ ಆಕ್ರಮಣಕಾರರು ಹಾಗೂ ಬ್ರಿಟಿಷರು ಎಷ್ಟೇ ಕ್ರೌರ್ಯ ಮೆರೆದರೂ ಕೊನೆಗೆ ಹಿಂದೂಗಳೇ ಜಯಿಸಿದರು. ಹಿಂದೂಗಳಲ್ಲಿ ಅಂತರ್ಗತವಾಗಿದ್ದ ಕ್ಷಾತ್ರ ಪ್ರವೃತ್ತಿ ಇದಕ್ಕೆ ಕಾರಣ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.