ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ‘ಮಣ್ಣು ಉಳಿಸಿ’ ಅಭಿಯಾನ: 9 ರಾಜ್ಯಗಳಲ್ಲಿ ಸದ್ಗುರು ಬೈಕ್‌ ಪ್ರಯಾಣ

Last Updated 28 ಮೇ 2022, 19:40 IST
ಅಕ್ಷರ ಗಾತ್ರ

ಬೆಂಗಳೂರು: ಯೂರೋಪ್ ಮತ್ತು ಮಧ್ಯಪ್ರಾಚ್ಯದ 26 ದೇಶಗಳನ್ನು ಸುತ್ತಿರುವ ಸದ್ಗುರು ಜಗ್ಗಿ ವಾಸುದೇವ ಅವರ ಬೈಕ್‌ ಪ್ರಯಾಣವು ಭಾರತದ 9 ರಾಜ್ಯಗಳಲ್ಲಿ 25 ದಿನಗಳವರೆಗೆ ಮುಂದುವರಿಯಲಿದೆ.

2022ರ ಮಾರ್ಚ್ 21ರಂದು ಸದ್ಗುರು ಜಗ್ಗಿ ವಾಸುದೇವ ಅವರು ’ಮಣ್ಣು ಉಳಿಸಿ’ ಅಭಿಯಾನದ ಅಂಗವಾಗಿ ಈ ಪ್ರವಾಸ ಆರಂಭಿಸಿದ್ದರು. ಈ ತಿಂಗಳ ಅಂತ್ಯಕ್ಕೆ ಸದ್ಗುರು ಅವರು ಗುಜರಾತಿನ ಜಾಮನಗರ್‌ದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಮಣ್ಣಿನ ಅವನತಿಯನ್ನು ತಡೆದು ಅದರ ಪುನರುಜ್ಜೀವನಕೈಗೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನವು ಎಲ್ಲ ದೇಶಗಳ ಜನತೆಯಲ್ಲಿ ಅರಿವು ಮೂಡಿಸಿ, ಸರ್ಕಾರಗಳು ಭೂಸ್ನೇಹಿ ಕಾರ್ಯನೀತಿಗಳನ್ನು ರೂಪಿಸಿ ತಮ್ಮ ದೇಶದ ಮಣ್ಣಿನ ರಕ್ಷಣೆ ಮಾಡುವಂತೆ ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ತಮ್ಮ ಪ್ರವಾಸದುದ್ದಕ್ಕೂ ಸದ್ಗುರು ಅವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿ, ರಾಜಕೀಯ ನಾಯಕರು, ವಿಜ್ಞಾನಿಗಳು, ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಚುನಾಯಿತ ನಾಯಕರ ಜೊತೆ ಮಾತುಕತೆನಡೆಸುತ್ತಿದ್ದಾರೆ.

’ಎಲ್ಲ ದೇಶಗಳ ಕಾರ್ಯನೀತಿಯಲ್ಲಿ ಪರಿವರ್ತನೆಯಾಗದಿದ್ದರೆ ಮಣ್ಣು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲ’ಎಂದು ಪ್ಯಾರಿಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದ್ಗುರು ಅವರು ಹೇಳಿದ್ದರು.

100 ದಿನಗಳಲ್ಲಿ 30 ಸಾವಿರ ಕಿಲೋ ಮೀಟರ್‌ಗಳ ದೂರ ಕೈಗೊಂಡಿರುವ ಸದ್ಗುರು ಅವರ ಪ್ರಯಾಣವು ಲಂಡನ್‌ನಿಂದ ಆರಂಭವಾಗಿತ್ತು. ಅಭಿಯಾನವು ಪ್ರಾರಂಭವಾದ ನಂತರ, 74 ರಾಷ್ಟ್ರಗಳು ಮಣ್ಣು ರಕ್ಷಿಸುವ ಕಾರ್ಯಗಳನ್ನು ಕೈಗೊಳ್ಳಲು ಒಪ್ಪಿಕೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT