ಸೋಮವಾರ, ಜನವರಿ 27, 2020
22 °C

ಮೆಟ್ರೊ ಮಾಲ್‌ ಗ್ರಾಹಕರಿಗೆ ಎಸ್‌ಬಿಐ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೆಟ್ರೊದ ಕ್ಯಾಶ್‌ ಆ್ಯಂಡ್‌ ಕ್ಯಾರಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಎಸ್‌ಬಿಐ, ಮೆಟ್ರೊ ಮಾಲ್‌ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಿಸಿದೆ. 

ಮೆಟ್ರೊ ಕ್ಯಾಶ್ ಆ್ಯಂಡ್‌ ಕ್ಯಾರಿಯ ಅಸ್ತಿತ್ವದಲ್ಲಿರುವ ಹಾಗೂ ಹೊಸ ಗ್ರಾಹಕರಿಗೆ ಎಸ್‌ಬಿ‌ಐ ಚಾಲ್ತಿ ಖಾತೆಗಳು, ವ್ಯಾಪಾರ ಡೆಬಿಟ್ ಕಾರ್ಡುಗಳು, ಪಿ‌ಓ‌ಎಸ್, ಡಿಜಿಟಲ್ ಉತ್ಪನ್ನಗಳು ಮತ್ತು ಇತರ ಆಸ್ತಿ ಉತ್ಪನ್ನಗಳಂತಹ ಅಂಶಗಳಿಗೆ ಮೌಲ್ಯವರ್ಧಿತ ಕೊಡುಗೆ ನೀಡಲಾಗುತ್ತದೆ ಮತ್ತು ಅರ್ಹ ಮೆಟ್ರೊ ಗ್ರಾಹಕರಿಗೆ ತಮ್ಮ ಮಳಿಗೆಗಳ ನವೀಕರಣಕ್ಕಾಗಿ ಸಾಲ ಸೌಲಭ್ಯ ನೀಡಲಾಗುವುದು ಎಂದು ಎಸ್‌ಬಿಐ ಘೋಷಿಸಿದೆ.

ಅಸ್ತಿತ್ವದಲ್ಲಿರುವ ಎಸ್‌ಬಿ‌ಐನ ಗ್ರಾಹಕರು ಹಾಗೂ ಹೊಸ ಎಸ್‌ಎಮ್‌ಇ ಗ್ರಾಹಕರಿಗೆ ಪೂರ್ವ ಅನುಮೋದಿತ ಮೆಟ್ರೊ ಕ್ಯಾಶ್ ಆ್ಯಂಡ್‌ ಕ್ಯಾರಿ ಕಾರ್ಡುಗಳೊಂದಿಗೆ ಉಡುಗೊರೆಯ ವೋಚರ್‌ ನೀಡಲಾಗುವುದು ಎಂದೂ ಅದು ಹೇಳಿದೆ.

ಈ ಕುರಿತ ಪ್ರಚಾರ ಅಭಿಯಾನವನ್ನು ಯಶವಂತಪುರ, ಬಿನ್ನಿಪೇಟೆ ಮತ್ತು ಕನಕಪುರ ಕೇಂದ್ರಗಳಲ್ಲಿ ಹಾಗೂ ಎಸ್‌ಬಿ‌ಐ ಮಹಾಲಕ್ಷ್ಮಿ ಬಡಾವಣೆ, ಚಾಮರಾಜಪೇಟೆ ಮತ್ತು ದೊಡ್ಡಕಲ್ಲಸಂದ್ರ ಶಾಖೆಗಳಲ್ಲಿ ಏಕಕಾಲದಲ್ಲಿ ಎಸ್‌ಬಿಐ ಆರಂಭಿಸಿದೆ. ಮೆಟ್ರೊ ಕಂಪನಿಯ ಕೊಡುಗೆ ಮತ್ತು ನಿರ್ವಹಣೆ ವಿಭಾಗದ ನಿರ್ದೇಶಕ ಮನಿಷ್‌ ಸಬ್ನಿಸ್‌, ಎಸ್‌ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ವಸುಧಾ ಭಟ್‌ ಹಾಗೂ ಅಭಿಜಿತ್‌ ಮಜುಂದಾರ್‌ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರು.

ಪ್ರತಿಕ್ರಿಯಿಸಿ (+)