ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ವಿಜ್ಞಾನ ಸಾಹಿತ್ಯ ಮತ್ತು ಸಂವಹನ ಕಾರ್ಯಾಗಾರವನ್ನು ಜ.22 ಹಾಗೂ 23ರಂದು ಹಮ್ಮಿಕೊಂಡಿವೆ.

ನಗರದ ವಿದ್ಯಾರಣ್ಯಪುರದಲ್ಲಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಭವನದಲ್ಲಿ ನಡೆಯುವ ಕಾರ್ಯಾಗಾರದಲ್ಲಿ 40ರಿಂದ 50 ಮಂದಿ ಪಾಲ್ಗೊಳ್ಳಲು ಅವಕಾಶವಿದ್ದು, ಪ್ರಮುಖ ವಿಜ್ಞಾನ ಲೇಖಕರು, ಸಂವಹನಕಾರರು ಮಾರ್ಗದರ್ಶನ ನೀಡುವರು ಎಂದು ಸಂಚಾಲಕರಾದ ಡಾ.ವಸುಂಧರ ಭೂಪತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜ್ಞಾನ ಸಾಹಿತ್ಯ ಮತ್ತು ಸಂವಹನವು, ವೈಜ್ಞಾನಿಕ ಜ್ಞಾನವನ್ನು ಸಮಾಜಕ್ಕೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲೂ ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಜನರಿಗೆ ಸರಳ ಹಾಗೂ ಪರಿಣಾಮಕಾರಿಯಾಗಿ ತಲುಪಿಸಬೇಕಾಗಿದೆ. ಈ ಕಾರಣದಿಂದಲೇ ಕಾರ್ಯಾಗಾರ ಆಯೋಜಿಸಿ ವಿಜ್ಞಾನ ಬರವಣಿಗೆಯ ಕೌಶಲಗಳನ್ನು ತಿಳಿಸಿಕೊಡಲಾಗುತ್ತದೆ ಎಂದರು.

ಕಾರ್ಯಾಗಾರ ಉಚಿತ. ಆಸಕ್ತರು 9986840447ಕ್ಕೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ರಾಜಾಸಾಬ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.