ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಸಂಭ್ರಮಕ್ಕೆ ಪರಿಸರಸ್ನೇಹಿ ಪಟಾಕಿ

Last Updated 15 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು ಮೂಲದ ನವೋದ್ಯಮ ಸೀಡ್‌ ಪೇಪರ್‌ ಇದೇ ಮೊದಲ ಬಾರಿಗೆ ದೀಪಾವಳಿ ಹಬ್ಬಕ್ಕಾಗಿ ಪರಿಸರಸ್ನೇಹಿ ಪಟಾಕಿ ತಯಾರಿಸಿದೆ. ನೋಡಲು ಸಾಮಾನ್ಯ ಪಟಾಕಿಗಳಂತೆ ಕಂಡರೂ ಇವು ಹೊಗೆ ಮತ್ತು ಶಬ್ದರಹಿತವಾದ ಸುರಕ್ಷಿತ ಪಟಾಕಿಗಳಾಗಿವೆ.

ತುಳಸಿ ಬೀಜದ ಪಟಾಕಿ, ಬಾಂಬ್‌, ಅಕಾ ಬಿಜಲಿ ಸೀಡ್‌ ಬಾಂಬ್‌, ಟೊಮಾಟೊ ಬೀಜದ ಬಾಂಬ್‌, ಸೀಡ್‌ ಚಕ್ರ ಮುಂತಾದ ಪಟಾಕಿಗಳು ಭಯಂಕರ ಶಬ್ದದೊಂದಿಗೆ ಸಿಡಿಯುವುದಿಲ್ಲ. ಹೊಗೆಯನ್ನೂ ಹೊರ ಸೂಸುವುದಿಲ್ಲ. ಇದರಿಂದ ಪರಿಸರ ಮಾಲಿನ್ಯದ ಪ್ರಶ್ನೆ ಉದ್ಭವಿಸುವುದಿಲ್ಲ.

ಪಟಾಕಿ ತಯಾರಿಸುವ ಹಾಳೆಯಲ್ಲಿ ತುಳಸಿ, ಟೊಮಾಟೊ ಸೇರಿದಂತೆ ಬಗೆಬಗೆಯ ಹೂವು, ಹಣ್ಣು ಮತ್ತು ತರಕಾರಿ ಬೀಜಗಳನ್ನು ತುಂಬಿರಲಾಗುತ್ತದೆ. ಪಟಾಕಿ ಸುಟ್ಟ ನಂತರ ಹಾಳೆಯನ್ನು ಕುಂಡದಲ್ಲಿ ಹಾಕಿದರೆ ಬೀಜಗಳು ಮೊಳಕೆಯೊಡೆಯುತ್ತವೆ.

ಪ್ಯಾಕ್‌ನಲ್ಲಿ ಪಟಾಕಿಗಳ ಜತೆಗೆಸೆಣಬಿನ ಚೀಲ ಮತ್ತು ದೀಪಾವಳಿ ಗ್ರೀಟಿಂಗ್‌ ಕಾರ್ಡ್‌ ಕೂಡ ಇರುತ್ತದೆ. ಗ್ರಾಹಕರು ಈ ಬಾರಿ ಪಟಾಕಿ ಹೊಡೆಯುವ ಆನಂದ ಅನುಭವಿಸುವ ಜತೆಗೆಹೊಗೆ ಮತ್ತು ಶಬ್ದರಹಿತದೀಪಾವಳಿ ಆಚರಿಸಬಹುದು ಎಂದು ಸೀಡ್‌ ಪೇಪರ್‌ ಇಂಡಿಯಾ ಸಂಸ್ಥಾಪಕ ರೋಶನ್‌ ರೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT