ಬುಧವಾರ, ಆಗಸ್ಟ್ 4, 2021
27 °C
15 ಟಿವಿ, ₹ 75 ಸಾವಿರ ವಶ

ಪ್ರತಿಷ್ಠಿತ ಕಂಪನಿಗಳ ಸ್ಟಿಕರ್ ಅಂಟಿಸಿ ಹೆಚ್ಚು ದರಕ್ಕೆ ಟಿವಿ ಮಾರಾಟ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಧಾರಣ ಟಿವಿಗಳಿಗೆ ಪ್ರತಿಷ್ಠಿತ ಕಂಪನಿಗಳ ಸ್ಟಿಕರ್​​ ಅಂಟಿಸಿ ಹೆಚ್ಚು ಹಣಕ್ಕೆ ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆಯ ಸುರೇಶ್ (45) ‌ಬಂಧಿತ ಆರೋಪಿ. ಆರೋಪಿಯಿಂದ 15 ಟಿವಿ, ₹ 75 ಸಾವಿರ ನಗದು ಜಪ್ತಿ ಮಾಡಲಗಿದೆ.

ಸುರೇಶ್‌ ಸಾಧಾರಣ ಟಿವಿಗಳನ್ನು ಖರೀದಿಸಿ ಅದಕ್ಕೆ ಸೋನಿ ಕಂಪನಿಯ ಸ್ಟಿಕರ್​​ ಅಂಟಿಸಿ ಅಸಲಿ ಟಿವಿಯಂತೆ ಬಿಂಬಿಸಿ, ಹೆಚ್ಚು ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಈ ವಿಷಯ ಗೊತ್ತಾಗಿ ಕಂಪನಿಯವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇರೆಗೆ ಸಿಸಿಬಿ ಪೊಲೀಸರು ವಿಶೇಷ ತಂಡ ರಚನೆ ‌ಮಾಡಿ ದಾಳಿ‌ ನಡೆಸಿ, ಆರೋಪಿ ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು