ಗುರುವಾರ , ಏಪ್ರಿಲ್ 2, 2020
19 °C

ವಿಡಿಯೊ ಕರೆ ಮಾಡಿ ನಗ್ನವಾಗಿ ನಿಲ್ಲುತ್ತಿದ್ದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳೆಯೊಬ್ಬರಿಗೆ ವಿಡಿಯೊ ಕರೆ ಮಾಡಿ ನಗ್ನವಾಗಿ ನಿಂತು ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದಡಿ ಕೃಷ್ಣಪ್ಪ (22) ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಕೃತ್ಯದ ಬಗ್ಗೆ ಮಹಿಳೆ ದೂರು ನೀಡಿದ್ದರು. ಅದರನ್ವಯ ಕೃಷ್ಣಪ್ಪನನ್ನು ಬಂಧಿಸಲಾಗಿದ್ದು, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತ ಮಹಿಳೆ ಸಂಬಂಧಿಯೂ ಆಗಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಪತಿ ಹಾಗೂ ಮಕ್ಕಳ ಜೊತೆಯಲ್ಲಿ ಮಹಿಳೆ ವಾಸವಿದ್ದಾರೆ. ಫೆ. 10ರಿಂದ ಫೆ. 22ರ ಅವಧಿಯಲ್ಲಿ 10ಕ್ಕೂ ಹೆಚ್ಚು ಬಾರಿ ಆರೋಪಿ ವಿಡಿಯೊ ಕರೆ ಮಾಡಿ ಕಿರಿಕಿರಿಯನ್ನುಂಟು ಮಾಡಿದ್ದ’ ಎಂದರು.

‘ಮಹಿಳೆ ವಿಡಿಯೊ ಕರೆ ಸ್ವೀಕರಿಸುತ್ತಿದ್ದಂತೆ ಆರೋಪಿ ನಗ್ನವಾಗಿ ನಿಂತುಕೊಳ್ಳುತ್ತಿದ್ದ. ಮುಖವನ್ನೂ ತೋರಿಸುತ್ತಿರಲಿಲ್ಲ. ಕೃತ್ಯಕ್ಕೆಂದು ಆರೋಪಿ ಮೂರು ನಂಬರ್‌ಗಳನ್ನು ಬಳಸಿದ್ದ. ಹೀಗಾಗಿ, ಆತ ಯಾರು ಎಂಬುದು ಮಹಿಳೆಗೆ ಗೊತ್ತಿರಲಿಲ್ಲ. ‘ಮಹಿಳೆ ದೂರು ನೀಡುತ್ತಿದ್ದಂತೆ ಮೊಬೈಲ್ ಸಂಖ್ಯೆ ಆಧರಿಸಿ ತನಿಖೆ ಕೈಗೊಂಡಾಗ ಸಿಕ್ಕಿಬಿದ್ದ’ ಎಂದು ಪೊಲೀಸರು ಹೇಳಿದರು.

ಸಹಪಾಠಿಗೆ ಲೈಂಗಿಕ ದೌರ್ಜನ್ಯ: ಬಂಧನ

ಕಾಲೇಜು ಸಹಪಾಠಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ವಿದ್ಯಾರ್ಥಿಯೊಬ್ಬನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಯಲಹಂಕದ ಅಬ್ದುಲ್‌ ಅಮೀಬ್ ಬಂಧಿತ. ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಈತ ತನ್ನ ಸಹಪಾಠಿ ಸಂತ್ರಸ್ತೆ ಜತೆ ಒಳ್ಳೆಯ ಒಡನಾಟ ಹೊಂದಿದ್ದ.

ಇತ್ತೀಚೆಗೆ ಅಮೀಬ್ ಬಳಿ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕವೊಂದನ್ನು ಸಂತ್ರಸ್ತೆ ಕೇಳಿದ್ದಳು. ಆ ಪುಸ್ತಕ ರೂಮ್‌ನಲ್ಲಿದ್ದು, ಅಲ್ಲಿಗೆ ಬಂದರೆ ಕೊಡುವುದಾಗಿ ಹೇಳಿದ್ದ. ಅದರಂತೆ ರೂಮ್‍ಗೆ ಕರೆದುಕೊಂಡು ಹೋಗಿ ಆಕೆಗೆ ಚಾ ನೀಡಿದ್ದ. ಅದನ್ನು ಕುಡಿದ ತಕ್ಷಣ ಸಂತ್ರಸ್ತೆ ಪ್ರಜ್ಞೆ ಕಳೆದುಕೊಂಡಿದ್ದಳು. ಈ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು