ಮಾಜಿ ಸಹೋದ್ಯೋಗಿಯಿಂದ ದೌರ್ಜನ್ಯ: ಮಹಿಳೆ ದೂರು

ಶುಕ್ರವಾರ, ಜೂಲೈ 19, 2019
24 °C

ಮಾಜಿ ಸಹೋದ್ಯೋಗಿಯಿಂದ ದೌರ್ಜನ್ಯ: ಮಹಿಳೆ ದೂರು

Published:
Updated:

ಬೆಂಗಳೂರು: ವಿವಾಹವಾಗುವಂತೆ ಒತ್ತಾಯಿಸಿ ಮಾಜಿ ಸಹೋದ್ಯೋಗಿ ಬಿಳೇಕಹಳ್ಳಿಯಲ್ಲಿರುವ ತನ್ನ ಮನೆಗೆ ಬಲವಂತವಾಗಿ ಕರೆದೊಯ್ದು, ದೌರ್ಜನ್ಯ ಎಸಗಿದ ಬಗ್ಗೆ ವಿವಾಹಿತೆ ಮಹಿಳೆಯೊಬ್ಬರು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಬಿಪಿಒ ಕಂಪನಿಯೊಂದರಲ್ಲಿ ಸದ್ಯ ನಾನು ಕೆಲಸ ಮಾಡುತ್ತಿದ್ದೇನೆ. ಬನ್ನೇರುಘಟ್ಟದಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್‌ ಕಂಪನಿಯಲ್ಲಿ ಪರಿಚಿತನಾಗಿದ್ದ ಗೌತಮ್‌ ಎಂಬಾತ ಈ ಕೃತ್ಯ ಎಸಗಿದ್ದಾನೆ. ಇದೇ 6ರಂದು ಬೆಳಿಗ್ಗೆ 12 ಗಂಟೆಗೆ ನನಗೆ ಕರೆ ಮಾಡಿದ್ದ ಗೌತಮ್‌, ತುರ್ತಾಗಿ ಏನೋ ವಿಷಯ ಮಾತನಾಡಬೇಕೆಂದು ಕರೆದಿದ್ದ. ಆದರೆ, ಆತ ನನ್ನನ್ನು ಕಾರಿನಲ್ಲಿ ಅವನ ಮನೆಗೆ ಅಪಹರಿಸಿಕೊಂಡು ಹೋಗಿ, ವಿವಾಹವಾಗುವಂತೆ ಒತ್ತಾಯಿಸಿ ಥಳಿಸಿದ್ದ. ಮದುವೆಗೆ ಒಪ್ಪದಿದ್ದರೆ ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಸಿದ’ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.

‘ಅವನ ದೌರ್ಜನ್ಯ ಸಹಿಸಲು ಸಾಧ್ಯವಾಗದೆ, ರಾತ್ರಿ 8.30ರ ಸುಮಾರಿಗೆ, ಆರೋಗ್ಯ ಸರಿ ಇಲ್ಲ. ‌ಔಷಧಿ ಅಂಗಡಿಗೆ ಹೋಗಬೇಕೆಂದು ಹೇಳಿದೆ. ಆಗ ಅವನು ನನ್ನನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದ. ಹಣ ತೆಗೆಯಲು ಎಟಿಎಂ ಕೇಂದ್ರವೊಂದಕ್ಕೆ ಅವನು ಹೋದಾಗ ನಾನು ತಪ್ಪಿಸಿಕೊಂಡು ‌ಮನೆಗೆ ವಾಪಸು ಬಂದೆ. ನಡೆದ ವಿಷಯವನ್ನು ಕುಟುಂಬದವರಿಗೆ ತಿಳಿಸಿದ ಬಳಿಕ ದೂರು ನೀಡಲು ನಿರ್ಧರಿಸಿದೆ’ ಎಂದೂ ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !