ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಿರುಕುಳ; ಸಹೋದ್ಯೋಗಿ ಬಂಧನ

Last Updated 14 ಮೇ 2020, 20:20 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಜೊತೆ ಕೆಲಸ ಮಾಡುತ್ತಿದ್ದ ವಿವಾಹಿತ ಗೃಹರಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ವೈ.ಕೆ.ನಂಜೇಗೌಡ ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

‘ಕುಣಿಗಲ್‌ನ ನಂಜೇಗೌಡ ಜೆ.ಪಿ.ನಗರದಲ್ಲಿರುವ ಗೃಹರಕ್ಷಕ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ಅದೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕಿ ನೀಡಿದ್ದ ದೂರಿನಡಿ ಆತನನ್ನು ಬಂಧಿಸಲಾಗಿತ್ತು. ನ್ಯಾಯಾಲಯದ ಜಾಮೀನು ಮೇಲೆ ಆತ ಬಿಡುಗಡೆ ಆಗಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ವರ್ಷದ ಹಿಂದಷ್ಟೇ ಗೃಹರಕ್ಷಕ ದಳ ಸೇರಿದ್ದ ಮಹಿಳೆ ಹಲವು ಕಡೆ ಭದ್ರತೆಗೆ ನಿಯೋಜನೆಗೊಳ್ಳುತ್ತಿದ್ದರು. ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಆರೋಪಿ, ಮಹಿಳೆ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ. ತನ್ನ ಜೊತೆ ಲೈಂಗಿಕವಾಗಿ ಸಹಕರಿಸಿದರೆ ಹಾಜರಾತಿ ನೀಡುವುದಾಗಿ ಪೀಡಿಸುತ್ತಿದ್ದ. ವಿಡಿಯೊ ಕರೆ ಮಾಡುವಂತೆ ಹಾಗೂ ತನ್ನ ಜೊತೆ ಪ್ರವಾಸಕ್ಕೆ ಬರುವಂತೆ ಕಾಟ ಕೊಡುತ್ತಿದ್ದ.’

‘ಆರೋಪಿ ವರ್ತನೆ ಮಿತಿ ಮೀರುತ್ತಿದ್ದಂತೆ ಮಹಿಳೆ ಪತಿಗೆ ವಿಷಯ ತಿಳಿಸಿದ್ದರು. ನಂತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆರೋಪಿ ವಿರುದ್ಧ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT